ಒಂದನೇ ಹಂತದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಡಾ. ಹೇಮಾವತಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶದಲ್ಲಿ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಭಾವಿ ಕಲ್ಯಾಣ ಮಂಟಪ ಹುಮನಾಬಾದ ತಾಲೂಕಿನ ಹಳ್ಳಿಖೇಡ ಬಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಊರಿನ ಗಣ್ಯರಾದ ಕೇಶವ ಮಹಾರಾಜ್, ಡಾ. ಹಸನ್ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಬೀದರ ಜಿಲ್ಲೆಯ ನಿರ್ದೇಶಕರಾದ ಪ್ರವೀಣಕುಮಾರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

 

ಈ ಸಂಧರ್ಭದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಡಾ. ಹಸನ್ ರವರು ಪ್ರಜ್ವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ ನೀಡಿದ್ದನ್ನು ವಿವರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗಣ್ಯರಾದ ಕೇಶವ ಮಹಾರಾಜ್ ರವರು ಯೋಜನೆಯಿಂದ ತಾಲೂಕು ವ್ಯಾಪ್ತಿಯಲ್ಲಿ ಆದ ಅನುಕೂಲಗಳ ಕುರಿತು ಮಾಹಿತಿ ನೀಡಿದರು ಬ್ಯಾಂಕ್ ಆಫ್ ಬರೋಡ ಬ್ಯಾಂಕ ನ ಪ್ರಬಂಧಕರಾದ ಅವಿನಾಶ ಮೌರ್ಯ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜಜನೆ ಬಿ.ಸಿ.ಟ್ರಸ್ಟ್ (ರಿ) ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಇದರ ಆವಶ್ಯಕತೆ ಅನಿವಾರ್ಯತೆ ಬಗ್ಗೆ ತಿಳಿಸಿದರು.

 

ನಂತರ ಬೀದರ ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ ಕ್ಷೇತ್ರದ ಹಿನ್ನಲೆ ಸ್ವ-ಸಹಾಯ ಸಂಘದ ಕಲ್ಪನೆ ಪ್ರಾರಂಭವಾದ ಬಗ್ಗೆ ಸಿಸಿ ಖಾತೆಯಲ್ಲಿ ಆಗುವ ವ್ಯವಹಾರಗಳ ಬಗ್ಗೆ, ತಗಲುವ ಬಡ್ಡಿಯ ಬಗ್ಗೆ ಸಿ.ಸಿ ಜೊತೆ ನಿರ್ವಹಣೆಗೂ ಹಾಗೂ ಟರ್ಮ ಲೋನ್ ನಿರ್ವಹಣೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು.

 

ನಂತರ ಹುಮನಾಬಾದ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ವೀರೇಶ ರವರು ಮಾತನಾಡಿ ತಾಲೂಕಿನ ಸಾಧನೆ ಬಗ್ಗೆ ವಿಮರ್ಶಿಸಿದರು ಹಾಗೂ ವಿಮಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಗತಿ ರಕ್ಷಾ ಕವಚ, ಆರೋಗ್ಯ ರಕ್ಷಾ ಕವಚ, ಸಂಪೂರ್ಣ ಸುರಕ್ಷಾ ಕಾರ್ಯಕರ್ತರ ಕುಟುಂಬ ಸುರಕ್ಷಾ ಯೋಜನೆ ಬಗ್ಗೆ ತಿಳಿಸಿದರು. ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರ ಮಾಶಾಸನ, ಜನಮಂಗಳ, ಶ್ರದ್ಧಾ ಕೇಂದ್ರ, ಸುಜ್ಞಾನನಿಧಿ ಕಾರ್ಯಕ್ರಮ. ಕೃಷಿ ಅನುದಾನ ವಿತರಣೆ, ಜ್ಞಾನವಿಕಾಸ ಕಾರ್ಯಕ್ರಮ ಜನಜಾಗೃತಿ ಕಾರ್ಯಕ್ರಮ, ಮಧ್ಯವರ್ಜನ ಶಿಬಿರ ಹೀಗೆ ಹಲವಾರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಣಕಾಸು ಪ್ರಬಂಧಕರಾದ ಶರಣಪ್ಪ ತಾಲೂಕು ವಿಕ್ಷಣ ಅಧಿಕಾರಿಗಳಾದ ಮಾರುತಿ, ತಾಲೂಕು ನೂಡಲ್ ಅಧಿಕಾರಿಗಳಾದ ರಘುನಾಥ ರೆಡ್ಡಿ, ಮೇಲ್ವಿಚಾರಕರಾದ ಸಂತೋಷ, ಅಶೋಕ, ಸವಿತಾ ಜಾಲಿಹಾಳ, ಮಹಾದೇವಿ ಹಾಗೂ ಸಹಾಯಕ ಪ್ರಭಂಧಕರಾದ ನಗ್ತಾ, ಕಛೇರಿ ಸಹಾಯಕರಾದ ಗಣೇಶ, ವಿ.ಎಲ್.ಇ ಗಳು ಮತ್ತು ಸೇವಾಪ್ರತಿನಿಧಿಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!