ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, ಬೇಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯ ಮರಕುಂದಾ ಗ್ರಾಮದ ಮೂಲಕ ರಾ.ಹೆ.ಸಂ: 65 ಮೂಲಕ ಗುಡ್ಸ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಮಾಹಿತಿಯಂತೆ, ಬೇಮಳಖೇಡಾ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಸಂತೋಷ, ರವರು ತಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಲಕ್ಷ್ಮಿಕಾಂತ, ಶ್ರೀ ಅಂಬ್ರೀಶ, ರವರೊಂದಿಗೆ ಶ್ರೀ, ಅರುಣಕುಮಾರ, ಆಹಾರ ನಿರೀಕ್ಷಕರು, ತಹಶಿಲ್ ಕಛೇರಿ ಬೀದರ ರವರ ಸಮಕ್ಷಮ ದಾಳಿ ಮಾಡಿ 19 ಕ್ವಿಂಟಲ್ 69 ಕೆ.ಜಿ ಪಡಿತರ ಅಕ್ಕಿ ಒಂದು ಗುಡ್ಸ್ ವಾಹನ ವಶ ಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹೀಗೆ ಒಟ್ಟು ಅ:ಕಿ: 10,68,127=00 ರೂಪಾಯಿ ಬೆಲೆ ಬಾಳುವ ಅಡಿತರ ಅಕ್ಕಿ ಮತ್ತು ಒಂದು ಗುಡ್ಸ್ ವಾಹನ ವಶ ಪಡಿಸಿಕೊಂಡ ಬೇಮಳಖೇಡಾ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ