ಹುಮನಾಬಾದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಡಾ. ಹೇಮಾವತಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶನದಲ್ಲಿ ಸಮುದಾಯ ಕಾರ್ಯಗಳಲ್ಲಿ ಕೈ ಜೋಡಿಸುವ ಮೂಲಕ ಸಮಾಜದ ಪ್ರಗತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಗಳು ಪೂರಕವಾಗಿದೆ.
ತಾಲೂಕಿನ ಹುಡಗಿ ವಲಯದಲ್ಲಿ ಹನುಮಾನ ದೇವಸ್ಥಾನದ ಜೀರ್ಣೋದ್ದಾರಕ್ಕೆ 1 ಲಕ್ಷ 50 ಸಾವಿರ ಡಿಡಿ ಬಂದಿದೆ. ಅದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟನ ತಾಲೂಕು ಯೋಜನಾಧಿಕಾರಿಗಳಾದ ವೀರೇಶ ಎನ್ ದೇವಾಸ್ಥಾನದ ಕಮಿಟಿಯವರಿಗೆ ಡಿಡಿ ವಿತರಣೆ ಮಾಡಿದರು ಈ ಸಂಧರ್ಭದಲ್ಲಿ ಬಾಬುರಾವ್ ಪೋಲಿಸ್ ಪಾಟೀಲ್ ಹೋಳಿಗಿ ಆಂಜನೇಯ ದೇವಸ್ಥಾನ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ನಾಗಮ್ಮ ಶರಣಪ್ಪ, ಮಹಾಂತೇಶ ನಂದಿ ಅಧ್ಯಕ್ಷರು ಹನುಮಾನ ಸೇವಾ ಟ್ರಸ್ಟ್, ದಯಾನಂದ ಸಿಂದನಕೇರ, ವಿನೋದ ದೆಮಶೆಟ್ಟಿ, ಅನಿಲ್ ನಂದಿ, ರತಿಕಾಂತ ಮೂಲಿ, ನಾಗೇಶ ವಾಳದೊಡ್ಡಿ, ಶ್ರವಣಕುಮಾರ ದೇವಶೆಟ್ಟಿ, ಸಂತೋಷ ಕಾರಮೂಗಿ, ವೀರೇಶ ಕೌಡಿ ಹಾಗೂ ವಲಯ ಮೇಲ್ವಿಚಾರಕರು ಮಹಾದೇವಿ, ತಾಲೂಕು ವಿಚಕ್ಷಣ ಅಧಿಕಾರಿ ಮಾರುತಿ, ತಾಲೂಕು ನೂಡಲ್ ಅಧಿಕಾರಿ ರಘುನಾಥ ರೆಡ್ಡಿ, ವಲಯದ ಸೇವಾಪ್ರತಿನಿಧಿಗಳು ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.