ಔರಾದ್ : ಮಹಾರಾಷ್ಟ್ರದ ದೇಗಲೂರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ವೀಕ್ಷಕರಾಗಿ ಕಾಂಗ್ರೆಸ್ ಹಿರಿಯ ಮುಖಂಡ ಡಾ. ಭೀಮಸೇನರಾವ ಶಿಂಧೆ ಅವರನ್ನು ಕಾಂಗ್ರೆಸ್ ಮಂಗಳವಾರ ನೇಮಿಸಿದೆ. ಈ ನೇಮಕಾತಿಯನ್ನು ಎಐಸಿಸಿಯ ಎಸ್ಸಿ ವಿಭಾಗದ ಅಧ್ಯಕ್ಷರಾದ ರಾಜೇಶ್ ಲಿಲೋಥಿಯಾ ಮಾಡಿದ್ದಾರೆ. ಔರಾದ್ ವಿಧಾನಸಭೆ ಚುನಾವಣೆಯಲ್ಲಿ ಸಮೀತದ ಅಂತರದಲ್ಲಿ ಸೋರಿರುವ ಡಾ. ಭೀಮಸೇರಾವ ಶಿಂಧೆ ಅವರಿಗೆ ಅನುಭವವಿದೆ. ಭಾಷೆಯ ಜ್ಞಾನವು ಇದೆ. ಅಲ್ಲದೇ ನಾನಾ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಶಿಂಧೆ ಅವರ ನೇಮಕಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಅಕ್ಟೋಬರ್ 30 ರಿಂದ ನವೆಂಬರ್ 12ರವರೆಗೆ ಕಾಂಗ್ರೆಸ್ ಪಕ್ಷದ ಆದೇಶದಂತೆ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದೇನೆ. ಈಗ ನವೆಂಬರ್ 13 ರಿಂದ 20ರವರೆಗೆ ಮಹಾರಾಷ್ಟ್ರದ ದೇಗಲೂರ್ ವಿಧಾನಸಭೆ ಕ್ಷೇತ್ರದಲ್ಲಿ ವೀಕ್ಷಕರಾಗಿ ಸೇವೆ ಸಲ್ಲಿಸುವದಾಗಿ ಡಾ. ಭೀಮಸೇನರಾವ ಶಿಂಧೆ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ