ಗುಡಸ್ ಗ್ರಾಮದಲ್ಲಿ 69 ನೇ ಮಹಾಪರಿನಿರ್ವಹನ ದಿನವನ್ನು ಆಚರಣೆ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಅಂಬೇಡ್ಕರ್ ಕಾಲೂನಿಯ ಸಮುದಾಯ ಭವನದಲ್ಲಿ ಗ್ರಾಮದ ದಲಿತ ಮುಖಂಡರಿಂದ ಮೇಣದಬತ್ತಿ ಬೆಳಗುವ ಮುಖಾಂತರ ಮಹಾಪರಿ ನಿರ್ವಹನ ದಿನವನ್ನು ಆಚರಿಸಲಾಯಿತು. ಡಿಸೆಂಬರ್ 6 1956 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಮರಣ ಹೊಂದಿದ್ದರು ಮರಣ ಹೊಂದಿದ ದಿನವನ್ನು ಮಹಾಪರಿನಿರ್ವಹನ ದಿನವನ್ನಾಗಿ ಆಚರಿಸಿಲಾಯಿತು. ಆವತ್ತು ಬಿ ಆರ್ ಅಂಬೇಡ್ಕರ್ ಅವರು ಇಹಲೋಕವನ್ನು ತ್ಯಜಿಸಿರುವ ದಿನವೆಂದು ಪರಿಗನಿಸಲಾಯಿತ್ತು. ಆ ದಿನವನ್ನು ನಮಗೆ ತುಂಬಲಾಗದ ದುಃಖದ ದಿನವಾಗಿತ್ತು ಎಂದು ತಿಳಿಸಿದರು ಡಿಸೆಂಬರ್ ಆರು ಹತ್ತೊಂಬತ್ತು ನೂರಾ ಐವತ್ತಾರು ಆ ದಿನವನ್ನು ಮಹಾಪರಿನಿರ್ವಹನ ದಿನವನ್ನಾಗಿ ಭಾರತ ದೇಶದಲ್ಲಿ ಆಚರಿಸಲಾಗುತ್ತದೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮೇಣದ ಬತ್ತಿಯನ್ನು ಬೆಳಗುವ ಮುಕಾಂತರ ಈ ದಿನವನ್ನು ಆಚರಿಸಲಾಗುವುದು ಈ ಸಂದರ್ಭದಲ್ಲಿ ಗ್ರಾಮದ ದಲಿತ ಮುಖಂಡರಾದ ಕೆಂಪಣ್ಣ ಶಿರಹಟ್ಟಿ. ಅಪ್ಪನ ಖಾತೆದಾರ್. ಮುತ್ತು ಕಾಂಬ್ಳೆ. ಮಂಜುನಾಥ್ ಕಾಮತ್. ಸಚಿನ್ ಹೆಗ್ಗಪಗೋಳ್. ಕೆಂಪಣ್ಣ ಕೆಂಪರಾಯಗೋಳ. ಹೀಗೆ ಊರಿನ ಹಲವಾರು ಗಣ್ಯಮಾನ್ಯರು ಮತ್ತು ದಲಿತ ಮುಖಂಡರು ಯುವಕರು ಮತ್ತಿತ್ತರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ ಹೆಚ್

error: Content is protected !!