ಕಲ್ಯಾಣ ಕರ್ನಾಟಕದ ಐತಿಹಾಸಿಕ, ಪಾರಂಪರಿಕ, ಸುಪ್ರಸಿದ್ಧ ಹುಮನಾಬಾದ ಕ್ಷೇತ್ರದ ಒಡೆಯ, ಪಟ್ಟಣದ ಆರಾಧ್ಯ ದೈವ “ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ 2025” ಪ್ರತಿ ವರ್ಷದಂತೆ ಈ ವರ್ಷವು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲು ಸಹಕರಿಸಿದ “ಸಕಲ ಭಕ್ತಾದಿಗಳಿಗೆ”, ಸ್ವಯಂ ಸೇವಕರಿಗೆ,ದೇವಸ್ಥಾನ ವ್ಯವಸ್ಥಾಪನ ಸಮಿತಿಗೆ, ಸೇವೆ ಸಲ್ಲಿಸಿದ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ, ಮಾಧ್ಯಮ ಮಿತ್ರರಿಗೆ, (ವಿಶೇಷವಾಗಿ ಪೊಲೀಸ್ ಇಲಾಖೆ , ಪೌರಾಡಳಿತ ಇಲಾಖೆ ,ಜೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ,ಸಾರಿಗೆ ಇಲಾಖೆ) ಜಾತ್ರಾ ಮಹೋತ್ಸವಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ನನ್ನ ಅನಂತ ಅನಂತ ಹೃತಪೂರ್ವಕ ಧನ್ಯವಾದಗಳು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ರವರು ಪ್ರಕಟಣೆ ಮೂಲಕ ಅಭಿನಂಧಿಸಿದ್ದಾರೆ.