ಕುಂಭಮೇಳಕ್ಕೆ ಹೋದಾಗ ರಸ್ತೆ ಅಪಘಾತ ಬೆಳಗಾವಿ ಮೂಲದ 6 ಜನ ದುರ್ಮರಣ

ಬೆಳಗಾವಿ: ಎರಡು ದಿನಗಳ ಹಿಂದಷ್ಟೇ ಪ್ರಯಾಗ್ ರಾಜ ಕುಂಭಮೇಳಕ್ಕೆ ತೆರಳಿದ ಗೋಕಾಕ ನಗರದ 6 ಜನ ವಾಹನ ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಮಧ್ಯಪ್ರದೇಶದ ಜಬಲ್ಪುರ ನಲ್ಲಿ ಈ ಘಟನೆ ನಡೆದಿದೆ.

ಮೃತರು ಬಾಲಚಂದ್ರ‌ ಗೌಡರ(50) ಸುನೀಲ್ ಶೇಡಶ್ಯಾಳೆ(45)  ಬಸವರಾಜ್ ಕುರ್ತಿ (63)  ಬಸವರಾಜ್ ದೊಡಮಾಳ್(49)  ಈರಣ್ಣ ಶೇಬಿನಕಟ್ಟಿ(27)  ವಿರುಪಾಕ್ಷ ಗುಮತಿ (61) ಪ್ರಯಾಗರಾಜ್ ದಿಂದ ಜಬಲ್ಪುರಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.  ಈ ಘಟನೆಯಲ್ಲಿಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಮುಸ್ತಾಕ ಶಿಂಧಿಕುರಬೇಟ, ಸದಾಶಿವ ಉಪದಲಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತಾಪ ಸೂಚಿಸಿದ ಸಚಿವ ಹಾಗೂ ಸಂಸದೆ: ಪ್ರಯಾಗ್ ರಾಜ ಕುಂಭಮೇಳಕ್ಕೆ ತೆರಳಿದ ಗೋಕಾಕ ನಗರದ 6 ಜನ ವಾಹನ ಅಪಘಾತದಲ್ಲಿ ಸಾವಿನಪ್ಪಿರುವ ಘಟನೆ ನಡೆದಿರುವುದು ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಪ್ರಾರ್ಥಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.

ವರದಿ : ಸದಾನಂದ.ಎಚ್

error: Content is protected !!