ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. 50 ವರ್ಷದ ಮಹುವಾ, 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ.
ಪಿನಾಕಿ ಮಿಶ್ರಾ ಕೂಡ ರಾಜಕಾರಣಿಯಾಗಿದ್ದು, ಒಡಿಶಾದ ಪುರಿಯ ಸಂಸದರಾಗಿದ್ದಾರೆ. ಪಿನಾಕಿ ಮಿಶ್ರಾ ಬಿಜು ಜನತಾದಳದ ನಾಯಕ.ಇತ್ತೀಚೆಗೆ ಮಹುವಾ ಮೊಯಿತ್ರಾ ಜರ್ಮನಿಯಲ್ಲಿ ಪಿನಾಕಿ ಮಿಶ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು, ಅವರು ಸಿಂಧೂರ ಮತ್ತು ಆಭರಣಗಳೊಂದಿಗೆ ಕಾಣಿಸಿಕೊಂಡಿದ್ದರು.
ಮಹುವಾ ಮೊದಲು ಲಾರ್ಸ್ ಬ್ರೋರ್ಸೆನ್ ಅವರನ್ನು ವಿವಾಹವಾಗಿದ್ದರು, ನಂತರ ವಿಚ್ಛೇದನ ಪಡೆದಿದ್ದರು.
ಮಹುವಾ ಅವರ ವಿವಾಹ ರಹಸ್ಯವಾಗಿಯೇ ಇತ್ತು, ಮೇ 3ರಂದೇ ಅವರ ಮದುವೆಯಾಗಿದೆ. ಜರ್ಮನಿಯ ಚಿತ್ರ ವೈರಲ್ ಆದ ಬಳಿಕ, ಅವರ ಎರಡನೇ ಮದುವೆ ರಹಸ್ಯ ಬಹಿರಂಗಗೊಂಡಿದೆ. ರಾಜಕೀಯದಲ್ಲಿ ತಮ್ಮ ತೀಕ್ಷ್ಣವಾದ ಹೇಳಿಕೆಗಳು ಮತ್ತು ಬಲವಾದ ವಿರೋಧದ ನಿಲುವಿಗೆ ಹೆಸರುವಾಸಿಯಾದ ಮಹುವಾ, ತಮ್ಮ ಹಳೆಯ ಸಂಬಂಧಗಳು ಮತ್ತು ವೈಯಕ್ತಿಕ ನಿರ್ಧಾರಗಳಿಗಾಗಿ ಹಲವು ಬಾರಿ ಮುನ್ನಲೆಗೆ ಬಂದಿದ್ದರು.
ಹಾಗೆಯೇ ವರದಿಗಳ ಪ್ರಕಾರ, ಪಿನಾಕಿ ಮೊದಲು ಸಂಗೀತಾ ಮಿಶ್ರಾ ಅವರನ್ನು ವಿವಾಹವಾದರು. ಇಬ್ಬರೂ ಜನವರಿ 16, 1984 ರಂದು ವಿವಾಹವಾಗಿದ್ದರಯ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪಿನಾಕಿ ಈಗ ಮಹುವಾ ಮೊಯಿತ್ರಾ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.