ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಪೂಜ್ಯ ಮ ನಿ ಪ್ರ ಸ್ವ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ
ಇತ್ತೀಚೆಗೆ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಕೈಗೊಂಡು ಘಟಪ್ರಭಾದ ಕೀರ್ತಿ ಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿ ಘಟಪ್ರಭಾ ನಗರದ ಹಾಗೂ ಸುತ್ತಮುತ್ತಲಿನ ಭಾಗದ ಭಕ್ತ ಸಮೂಹಗಳಿಗೆ ಹಾಗೂ ರೈತ ಬಾಂಧವರಿಗೆ ಮಳೆ ಬೆಳೆ ಚೆನ್ನಾಗಿ ಆಗಲೆಂದು ಈ ಭಾಗದ ಜನರ ಒಳ್ಳೆಯದಕ್ಕಾಗಿ ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆದುಕೊಂಡು ತಾಯ್ನಾಡಿಗೆ ಮರಳಿದ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠ ಹಾಗೂ ಮುಂಡರಗಿ ಮಠದ ಜಗದ್ಗುರುಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಮಠದಲ್ಲಿ ಭೇಟಿಯಾದ ಘಟಪ್ರಭಾದ ಸದ್ಭಕ್ತರು ಭಕ್ತಿ ಪೂರ್ವಕವಾಗಿ ಗೌರವ ಸಮರ್ಪಣೆ ಮಾಡಿದರು,
ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ, ಕರವೇ ರಾಜ್ಯ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣಾ ಅರಭಾವಿ. ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ .ಕನ್ನಡ ಸೇನೆ ಗೋಕಾಕ ತಾಲೂಕು ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕರವೇ ಮೂಡಲಗಿ ತಾಲೂಕ ಅಧ್ಯಕ್ಷರಾದ ಸುರೇಶ್ ಚಿಗಡೊಳ್ಳಿ . ಕರವೇ ಹುಕ್ಕೇರಿ ತಾಲೂಕ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಶಿಂದೆ. ಕರವೇ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ. ಕರವೇ ಕಾರ್ಯದರ್ಶಿಯಾದ ಮಲ್ಲಪ್ಪ ಚೌಕಶಿ . ಕಾರ್ಯಕರ್ತರಾದ ಮಂಜುನಾಥ್ ಪಾಟೀಲ್. ಮಲ್ಲಿಕಾರ್ಜುನ್ ಬೆಳವಿ. ವೈಭವ್ ಮಾನೆ .ಅರುಣ್ ಮಾನೆ .ಶರೀಫ್ ಕಬ್ಬೂರ, ಕೆಂಪಣ್ಣಾ ಹೊಸೂರ, ಸೇರಿದಂತೆ ಹಲವಾರು ಭಕ್ತರು ಶ್ರೀಗಳಿಗೆ ಸತ್ಕರ್ಷಿ ಗೌರವ ಸಮರ್ಪಣೆ ಮಾಡಿದರು.
