ಉತ್ತರ ಪ್ರದೇಶ ಉತ್ತರ ಪ್ರದೇಶದ ಕುಷಿನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ತನ್ನ ಮೂರು ವರ್ಷದ ಮಗನನ್ನು ಮಾರಾಟ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬರ್ವಾಪಟ್ಟಿಯ ನಿವಾಸಿ ಹರೀಶ್ ಪಟೇಲ್ ಎಂದು ಗುರುತಿಸಲಾಗಿದೆ.
ಆರೋಪಿ ತನ್ನ ಪತ್ನಿಯನ್ನು ಆರನೇ ಮಗುವಿನ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಿಲಿಸಿದ್ದ. ಆದರೆ ಆಸ್ಪತ್ರೆಯ ಶುಲ್ಕವನ್ನು ಭರಿಸಲಾಗದ ಪಟೇಲ್, ತನ್ನ ಮೂರನೇ ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದನು. ಈ ಮಾಹಿತಿ ಪಡೆದ ಪೊಲೀಸರು, ಪ್ರಕರಣದಲ್ಲಿ ಭಾಗಿಯಾದ ಮಗುವನ್ನು ದತ್ತು ಪಡೆದ ಪೋಷಕರು, ಆಸ್ಪತ್ರೆಯ ಸಹಾಯಕಿ, ನಕಲಿ ವೈದ್ಯೆ ತಾರಾ ಕುಶ್ವಾಹಾ ಸೇರಿ ಐವರನ್ನು ಬಂಧಿಸಿದ್ದಾರೆ.