ಮಾನ್ವಿ: ನಿರ್ಲಕ್ಷ್ಯ ಮಾಡಿದ್ರೆ ವಜಾಗೆ ಶಿಫಾರಸು – ಪಿಡಿಓಗಳಿಗೆ ಮಾಜಿ ಸಚಿವ ಬೋಸರಾಜು ಎಚ್ಚರಿಕೆ

ಮಾನ್ವಿ : ನಗರದ ಶಾಸಕರ ಸಭಾಂಗಣದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿಗಳ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳ ಬಗ್ಗೆ ಸಭೆ ನಡೆಯಿತು.

ಈ ಸಭೆಯಲ್ಲಿ ಮಾಜಿ ಸಚಿವ ಎನ್.ಎಸ್. ಬೋಸರಾಜು ಮತ್ತು ಶಾಸಕ ಜಿ. ಹಂಪಯ್ಯ ನಾಯಕ್ ಅವರು ಭಾಗವಹಿಸಿದ್ದರು. ಬರಗಾಲದ ಈ ಸಮಯದಲ್ಲಿ ಬಡವರಿಗೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ, ಮುಂದಿನ ಏಳು ತಿಂಗಳು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಬೋಸರಾಜು ಸೂಚಿಸಿದರು.

ಕ್ಷೇತ್ರಕ್ಕೆ 39 ಹೊಸ ಕೊಳವೆಬಾವಿ ಕೊರಿಸಲು ಸರ್ಕಾರ ಅನುಮತಿ ನೀಡಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚು ಕೊರಿಸಲು ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅವರು ಹೇಳಿದರು.

ಸಮಸ್ಯೆ ಬಗೆಹರಿಸುವಲ್ಲಿ ನೆಪ ಹೇಳಿ ಜಾರಿಕೊಂಡರೆ, ಯಾರ ಮುಲಾಜೂ ಇಲ್ಲದೆ ನೌಕರಿಯಿಂದ ವಜಾ ಮಾಡಲು ಶಿಫಾರಸು ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

error: Content is protected !!