ಹುಮನಾಬಾದ : ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಿರುತ್ತಿರಿ, ಸದರಿ ಪಾರ್ಕಿಂಗ್ ನಲ್ಲಿ ಸುಮಾರು 200 ರಿಂದ 300ಕಿಂತ ಹೆಚ್ಚು ವಾಹನಗಳು ಪ್ರತಿನಿತ್ಯ ಪಾರ್ಕಿಂಗ್ ಮಾಡಿರುತ್ತಾರೆ.
ಒಂದು ವಾಹನಕ್ಕೆ ಸುಮಾರು 30 ರೂಪಾಯಿ ಶುಲ್ಕ ಪಡೆಯುತ್ತಿದ್ದಾರೆ. ಅದನ್ನು ವಾಹನ ಸವಾರರಿಗೆ ಹೊರೆಯಾಗುತ್ತಿರುವ ಪ್ರಯುಕ್ತ ಸದರಿ ಶುಲ್ಕವನ್ನು ಕಡಿತ ಮಾಡಿ ಪ್ರತಿ ವಾಹನಕ್ಕೆ 05 ರಿಂದ 10 ರೂಪಾಯಿಗಳು ಮಾಡಬೇಕೆಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ ಘಟಕದ ಅಧ್ಯಕ್ಷ ಓಂಕಾರ್ ತುಂಬಾ ಹುಮನಾಬಾದ ಘಟಕ ಕೆ,ಕೆ,ಆರ್.ಟಿ.ಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.