ಡಾ ಬಾಬು ಜಗಜೀವನರಾವ್ ಭವನ ಮುಂದೆ ಕೆಸರು ಗದ್ದೆ ತಾಲೂಕು ಎನಿಸಿ ಕೊಳ್ಳುವ ಪಟ್ಟಣದ ಮುಖ್ಯರಸ್ತೆ ಪರಿಸ್ಥಿತಿ ಇದು

ಹುಕ್ಕೇರಿ : ತಾಲೂಕಾ ದಂಡಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಅಂಗನವಾಡಿ) ಮಿನಿ ವಿಧಾನಸೌಧ ಅಧಿಕಾರಿಗಳು ಕೂಡಾ ಇದೇ ರಸ್ತೆ ಮೇಲೆ ಹಾದು ಹೋಗುತ್ತಾರೆ.

 

ಎಲ್ಲಾ ಅಧಿಕಾರಿಗಳು ಕಣ್ಮುಚ್ಚಿ ಹೋಗುತ್ತಾರ ಅಥವಾ ಕಣ್ತೆರೆದು ಹೋಗುತ್ತಾರಾ ಯಾಕೆ ಏನಾಗಿದೆ ಇವರಿಗೆ ಸರ್ಕಾರ ಹಣ ದುರುಪಯೋಗ ಮಾಡಿಕೊಂಡರಾ ಕೆಲಸ ಮಾಡಿಸಲು ಏನಾಗ್ತಾ ಇದೆ ಇವರಿಗೆ ಸಂಬಳ ಮಾತ್ರ ಸರಿಯಾಗಿ ಟೈಂಗೆ ಬೇಕಾಗುತ್ತೆ ಸಂಬಳ ತೆಗೆದುಕೊಂಡು ಮನೆಗೆ ಹೋಗ್ತಾರಾ ಸರ್ಕಾರ ಇವರಿಗೆ ಸಂಬಳ ಕೊಡುವುದು ಜನರ ಕಷ್ಟ ಅರಿತು ಜನರ ಕೆಲಸಗಳನ್ನು ಮಾಡಲು ಪುರಸಭೆ ಅಧಿಕಾರಿಗಳೇ ಸ್ಥಳೀಯ ಜನರು ನಿಮ್ಮ ಗಮನಕ್ಕೆ ತಂದರು ನೀವೇನು ಮಾಡುತ್ತಿದ್ದೀರಿ.

 

ಇವರಿಗೆ ಹಾಗಾದರೆ ಕಷ್ಟಕ್ಕೆ ಕರಿಯಬೇಡಿ ಊಟಕ್ಕೆ ಮರಿಯಬೇಡಿ ಎಂಬ ಗಾದೆ ಈ ತಾಲೂಕಾ ಅಧಿಕಾರಿಗಳು ಗಾದೇ ಸರಿ ಇದೆ ಎಂದು ರಾಜ್ಯದ ಜನತೆಗೆ ತೋರಿಸಿಕೊಟ್ಟಿದ್ದಾರೆ ಅಧಿಕಾರಿಗಳಿಗೆ ನಾಚಿಕೆ ಬರಬೇಕು ಈ ರಸ್ತೆ ಮೇಲೆ ಹೇಗೆ ಓಡಾಡುತ್ತೀರಾ ಇಂಥ ಅಧಿಕಾರಿಗಳು ತಾಲೂಕಿನಲ್ಲಿ ಇರುವುದು ದುರದೈವ ಇವರಿಗೆ ಸರ್ಕಾರ ಪುಕ್ಕ ಶೆಟ್ಟಿ ಸಂಬಳ ನೀಡುತ್ತಿದೆ ಎಂಬೆಂತೆ ಕಾಣತ್ತೆ ಸ್ವಲ್ಪ ಏನಾದರೂ ತಮಗೆ ನಾಚಿಕೆ ಬಂದರೆ ರಸ್ತೆ ಕೆಲಸ ಸರಿ ಮಾಡಿ ಯಾಕೆ ನಿಮ್ಮ ಲಾಭಕ್ಕೆ ಜನರನ್ನು ಬಲಿ ಮಾಡ್ತಾ ಇದ್ದೀರಾ ಈಗ ಮಹರ್ಷಿ ವಾಲ್ಮೀಕಿ ಜಯಂತಿ ಕೂಡ ಅದೇ ರಸ್ತೆಯಲ್ಲಿ ನಡಿತಾ ಇದೆ ಸ್ಥಳೀಯ ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಹಾಗಾದರೆ ಡಾ. ಬಾಬು ಜಗಜೀವನ್ ರಾವ್ ಭವನಕ್ಕೆ ಕಾರ್ಯ ಕಲ್ಪ ಯಾವಾಗ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಕೊಳ್ಳುತ್ತಾರೆ ಎಂಬುದು ನೋಡಬೇಕಾಗಿದೆ. ಸ್ಥಳೀಯ ಜನರು ವಿಶ್ವನಾಥ್ ನೂಲಿ. ಬಾಹುಸಹೇಬ್ ಪಾಂಡ್ರೆ ಆಗ್ರಹಿಸಿದರು

 

ಇನ್ನಾದರೂ ಅಧಿಕಾರಿಗಳು ಸರಿಯಾಗಿ ಜನರಿಗೆ ಸ್ಪಂದನೆ ಮಾಡ್ತಾರಾ ಇಲ್ಲ ಕಾದು ನೋಡಬೇಕಾಗಿದೆ.

 

ವರದಿ : ಸದಾನಂದ್ ಎಚ್

error: Content is protected !!