ಸಾಲಾಭದೆ ತಾಳಲಾರದೇ ಪೆಟ್ರೋಲ್ ಸುರಿದು ಕೊಂಡು ರೈತ ಆತ್ಮಹತ್ಯೆ ರೈತನ ಮನೆಗೆ ರೈತ ನಿಯೋಗ ಭೇಟಿ

ಸಾಲದ ಭಾದೆ ತಾಳಲಾರದೆ ಇರಗಪಳ್ಳಿ ಗ್ರಾಮದ ರೈತ ಚಂದ್ರಪ್ಪಾ ತಂದೆ ತಿಪ್ಪಣ್ಣಾ ಪೂಜಾರಿ ಸಾಲದ ಭಾದೆ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಮನೆಗೆ ರೈತ ಸಂಘ ನಿಯೋಗ ಭೇಟಿ

 

ಪೊತಂಗಲ್ ಗ್ರಾಮದ ರೈತ ಪಾಂಡಪ್ಪ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ರೈತ ಸಂಘ ನಿಯೋಗ

 

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರಕ್ಕಾಗಿ ಮತ್ತು ಆತ್ಮಹತ್ಯೆ ತಡೆಗಟ್ಟಲು ಆಗ್ರಹಿಸಿ ಸುಲೆಪೆಟ ಕ್ರಾಸ್ ಬಳಿ ರಸ್ತೆ ತಡೆ ಚಳುವಳಿ ನಡೆಸಲು ತಿರ್ಮಾನಿಸಿದ ರೈತ ಸಂಘ

 

ಹತ್ತಿ ಬೆಳೆಗಾರರು ಸಂಕಷ್ಟಕ್ಕೆ

 

ಹತ್ತಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

 

ಹತ್ತಿ ಬಿಡಸುವ ಸಂಧರ್ಭದಲ್ಲಿ ಮಳೆ ಬಂದು ಹತ್ತಿ ಸಂಪೂರ್ಣ ಮಳೆ ನೀರಿನಲ್ಲಿ ನೆನೆದು ಹೋಗಿ ಹಾಳು ಹಂತಿ ಆಗಿದೆ , ಹತ್ತಿ ಬೆಳೆಗೆ ಮಾಡಿದ ಲಾಗುವಾಡಿ ಹತ್ತಿ ಬಿಜ ಖರೀದಿ , ಹತ್ತಿ ಬೆಳೆಗೆ 2 ಬಾರಿ ಕಳೆ ತೆಗೆಯಲಾಗಿದೆ, 4 ಬಾರಿ ಔಷಧಿ ಸಿಂಪರ್ಣೆ ಮಾಡಲಾಗಿದೆ , 2 ಸಲ ಎಡಿ ಹೊಡೆಯಲಾಗಿದೆ,,ಮತ್ತು ಹತ್ತಿ ಬಿಡಿಸಲು 8 ರೂಪಾಯಿ ಕೆಜಿ ಮತ್ತು 10 ರೂಪಾಯಿ ಕೆಜಿ ಹತ್ತಿ ಬಿಡಿಸುವ ಕೂಲಿಗೆ ಹತ್ತಿ ಬಿಡಿಸುತ್ತಿದ್ದಾರೆ , ಹತ್ತಿ ಬೆಳೆಗಾರರ ಸಾಲದ ಸಿಲುಕಿ ಸಂಕಷ್ಟಕ್ಕೆ ಒದ್ದಾಡುತ್ತಿರುವ ಹತ್ತಿ ಬೆಳೆಗಾರರ ಬಿದಿಗೆ ಬಂದಂತಾಗಿದೆ ರೈತರ ನೆರವಿಗೆ ಬಾರದ ಕೃಷಿ ಸಚಿವರು ಹತ್ತಿ ಬೆಳೆಗಾರರ ವಿರೋಧಿ ನೀತಿ ಕೈ ಬಿಟ್ಟು ಹತ್ತಿ ಬೆಳೆಗಾರರ ಗೊಳು ಕೆಳಲು ರೈತ ಸಂಘ ಒತ್ತಾಯ

 

ಹತ್ತಿ ಬೆಳೆಗೆ ಬೆಂಬಲ ಬೆಲೆ ವಿಲ್ಲದೆ ಹತ್ತಿ ಬೆಳೆಗಾರರು ನೆಲಕಚ್ಚಿದಂತಾಗಿದೆ ಹತ್ತಿ ಬೆಳೆಗೆ ಮಾಡಿದ ಲಾಗೊಡಿ ಸಹ ಮರಳಿ ಬಾರದಂತಾಗಿದೆ

ಸಾಲದ ಭಾದೆ ತಾಳಲಾರದೆ ಹತ್ತಿ ಬೆಳೆಗಾರರು ಪೆಟ್ರೋಲ್ ಸುರಿದು ಕೊಂಡು ಪಾಂಡಪ್ಪ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ರಾಜ್ಯ ಸರ್ಕಾರಕ್ಕೆ ಸ್ವಲ್ಪ ನು ಕರುಣೆಯು ಇಲ್ಲದಂತಾಗಿದೆ ಬರಿ ಮೊಸಳೆ ಕಣ್ಣೀರು ಸುರಿಸುವ ಸರ್ಕಾರ ವಾಗಿದೆ ಹತ್ತಿ ಖರೀದಿ ಕೇಂದ್ರ ತೆರೆಯಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಜಿಲ್ಲೆಯಲ್ಲಿ ಒಟ್ಟು ಹತ್ತಿ ಬೆಳೆ ನಾಟಿ ಮಾಡಿದ 105508 ಹೆಕ್ಟೇರ್ ಹತ್ತಿ ನಾಟಿ ಮಾಡಿದ ರೈತರು ಕಂಗಾಲಾಗಿದ್ದಾರೆ,

 

ಈ ಸಂಧರ್ಭದಲ್ಲಿ ಶರಣಬಸಪ್ಪಾ ಮಮಶೆಟ್ಟಿ ಜಿಲ್ಲಾ ಅಧ್ಯಕ್ಷರು ಕೆಪಿರ್ಸ್, ಜಾಫರ್ ಖಾನ್

ಅಧ್ಯಕ್ಷರು KPRS ಚಿಂಚೊಳಿ, ಪರಮೇಶ್ವರ ಕಾಂತಾ

ಅಧ್ಯಕ್ಷರು KPRS ಕಾಳಗಿ,

ಹಣಮಂತ ಪೂಜಾರಿ, ದಿಲೀಪ್ ನಾಗೂರೆ, ರಾಯಪ್ಪಾ ಹುರುಮುಂಜಿ ಉಪಸ್ಥಿತರಿದ್ದರು.

 

 

ವರದಿ : ರಾಜೇಂದ್ರ ಪ್ರಸಾದ್