ಗಂಡ ಹೆಂಡತಿ ಜಗಳ ಮಕ್ಕಳನ್ನ ವಿಷ ಕುಡಿಸಿ ತಾನು ವಿಷ ಕುಡಿದ ಮಹಿಳೆ ಆಸ್ಪತ್ರೆಗೆ ದಾಖಲು ಪುಟಾಣಿಗಳ ಸ್ಥಿತಿ ಚಿಂತಾ ಜನಕ 

ಹೌದು ಗಂಡ ಹೆಂಡತಿ ಜಗಳದ ನಡುವೆ ಕೋಪ ಗೊಂಡಿರುವ ಹೆಂಡತಿಯು ತಾನು ವಿಷ ಕುಡಿದಿದಲ್ಲದೆ ಮಕ್ಕಳಿಗೂ ವಿಷ ಹಾಕಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿ ಪೀರ್ ತಾಂಡಾದಲ್ಲಿ ನಡೆದಿದೆ,

 

ಗೀತಾಬಾಯಿ ಸಂತೋಷ್ ರಾಠೋಡ್ ಎಂಬ ಮಹಿಳೆಯು ತನ್ನ ಗಂಡನ ಮೇಲಿನ ಸಿಟ್ಟಿಗೆ ತಾನು ವಿಷ ಸೇವಿಸಿ ಮಕ್ಕಳಿಗೆ ವಿಷವನ್ನು ಕುಡಿಸಿದ್ದಾಳೆ.

 

ಮಕ್ಕಳಾದ ಚೈತನ್ಯ ಮತ್ತು ಧನುಷ್ ಪುಟ್ಟ ಕಂದ ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

 

ಚಿಂಚೋಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಅವರ ಚಿಕಿತ್ಸೆ ಮುಂದುವರೆದಿದೆ,

 

ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!