ವಿಶೇಷ ವರದಿ ರಾಜೇಂದ್ರ ಪ್ರಸಾದ್
ಬಂಜಾರ ಸಮಾಜ ಸಾಂಸ್ಕೃತಿಕ ಶ್ರೀಮಂತಿಕೆ ಹೆಸರುವಾಸಿ ಪ್ರತಿಯೊಬ್ಬ ಗಳು ವಿಶಿಷ್ಟ ಮತ್ತು ವಿಭಿನ್ನ ವಾಗಿರುತ್ತದೆ ಅದರಲ್ಲೂ ಚಿಂಚೋಳಿ ತಾಲೂಕಿನ ತಾಂಡಗಳಲ್ಲಿ ಆಚರಿಸುವ ದೀಪಾವಳಿ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ. ತಾಂಡದ ಯುವತಿಯರು ಒಂದು ಕಡೆ ಸೇರಿ ಮನೆ ಮನೆಗೆ ತೆರಳಿ ಹಿರಿಯರಿಗೆ ದೀಪ ಬೆಳಗಿ ಹಾಡಿ ಹರಿಸುವುದೇ ಹಬ್ಬದ ಆಚರಣೆಯ ಮುಖ್ಯ ಉದ್ದೇಶ. ಯುವತಿಯರು ಕಾಡಿಗೆ ಹೋಗಿ ಹೂವು ತರುವ ಸಾಂಪ್ರದಾಯ ಇನ್ನು ಜೀವಂತವಾಗಿದೆ, ಹಬ್ಬಗಳು ಕೇವಲ ಕುಟುಂಬಕ್ಕೆ ಸೀಮಿತವಾಗಿಸದೆ ಎಲ್ಲರೂ ಒಟ್ಟುಗೂಡಿ ಆಚರಿಸುವುದು ಬಂಜಾರ ಸಮಾಜದವರ ಸಹಭಾವಿ ಪರಸ್ಪರ ಬಾಂಧವ್ಯ ಮೆಚ್ಚಿಗೆ ಅರ್ಹವಾಗಿದೆ. ಚಿಕ್ಕ ಮಕ್ಕಳಿಂದ ವೃದ್ಧರ ತನಕ ಪಾಲ್ಗೊಳ್ಳುವ ಹಬ್ಬವಾದ ದೀಪಾವಳಿ ಅಮಾವಾಸ್ಯೆಯ ದಿನದಂದು ರಾತ್ರಿ ಅಧಿಕೃತವಾಗಿ ಹಿರಿಯರು ಚಾಲನೆ ನೀಡುತ್ತಾರೆ ಮರುದಿನ ಬೆಳಗ್ಗೆ ‘ಗಣ್ಯೋ ಪಲ್ಯೋ ಧರಿಸಿ’ ( ವಿಶೇಷ ಅಲಂಕೃತ ಸಾಮಗ್ರಿ ) ಅದರ ಮೇಲೆ ಬುಟ್ಟಿ ಇಟ್ಟು ಜನಪದ ಗೀತೆಗಳು ಹಾಡು ಯುವತಿಯರ ದಂಡು ಕಾಡಿಗೆ ತೆರಳುತ್ತದೆ. ಹಟ್ಟಿ ಗೌಡರ ಮನೆಯ ಹುಡುಗಿಯರು ಅದರ ನೇತೃತ್ವ ವಹಿಸುತ್ತಾರೆ. ಗುಂಪಾಗಿ ತೆರಳುವ ಯುವತಿಯರ ತಾಂಡದಿಂದ ಅರಣ್ಯದಂಚಿನಲ್ಲಿ ಸಿಗುವ ಕಣಗಲ್ ಗಿಡದ ಹೂವು ಕೀಳುತ್ತಾರೆ ಆ ಸ್ಥಳದಲ್ಲಿ ಗುರುತು ಮಾಡಿದ ಬೇವಿನ ಮರ ಒಂದರ ಕೆಳಗೆ ಎಲ್ಲರೂ ಕುಳಿತು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಮದುವೆ ನಿಗದಿಯಾಗಿರುವ ಕನ್ಯೆಯರು ಅಲ್ಲಿ ತಮ್ಮ ಬಾಲ್ಯವನ್ನು ನೆನೆದು ಕಣ್ಣೀರುಡುವ ಪ್ರಸಂಗ ನಡೆಯುತ್ತದೆ ಆ ಸಂದರ್ಭದಲ್ಲಿ ಕೆಲ ನಿಮಿಷ ಅಲ್ಲಿ ಮೌನ ಆವರಿಸುತ್ತದೆ. ಕಣಗಲ್ ಹೂವಿನ ಬುಟ್ಟಿ ತಲೆ ಮೇಲೆ ಹೊತ್ತು ಯುವತಿಯರ ಗುಂಪು ಹಾಡು ಹೇಳುತ್ತಾ ತಾಂಡಕ್ಕೆ ಮರಳುತ್ತಾರೆ ಹಿರಿಯರು ತಾಂಡದ ಗಡಿ ಬಳಿ ಬಂದು ಸ್ವಾಗತಿಸುತ್ತಾರೆ. ಮನೆಮನೆಗಳಲ್ಲಿ ತೆರಳಿ ಸಗಣಿಯ ಗುರ್ಚಿಯಲಿ ಹೂವುಗಳನ್ನು ಇಡುತ್ತಾರೆ ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿ ಇಟ್ಟು ಪೂಜೆ ಸಲ್ಲಿಸುತ್ತಾರೆ.ತಾಂಡಗಳಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ಮನೆಗಳಿಗೆ ತೆರಳಿ ಮನೆ ಹಾಗೂ ಅವರ ಹೆಸರು ಸೇರಿಸಿಕೊಂಡು ಹಾಡು ಹೇಳುವ ಮೂಲಕ ಶುಭಾಶಯ ಕೋರುತ್ತರೆ, ಗೌಡರ ಮನೆಯವರು ಸಿಹಿ ಹಂಚಿದ ನಂತರ ಹಿರಿಯರ ಬಳಿ ತೆರಳಿ ಆಶೀರ್ವಾದ ಪಡೆಯುತ್ತಾರೆ ಹೀಗೆ ಚಿಂಚೋಳಿ ತಾಲೂಕಿನ ತಾಂಡಗಳಲ್ಲಿ ದೀಪಾವಳಿ ಹಬ್ಬದ ಪೂರ್ವಜರ ಹಿಡಿದು, ಇಲ್ಲಿಯವರೆಗೆ ಸಡಗರ ಸಂಭ್ರಮದಿಂದ ನಡೆಯುತ್ತದೆ.