ಎಜ್ಯುಕೇಶನ್ ಅಂಡ್ ಇನ್ಸ್ಟಿಟ್ಯೂಶ್ನಲ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮ

ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಿಸೋಸಿ ಗ್ರಾಮದ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ “ಎಲೈಟ್ ಎಜ್ಯುಕೇಶನ್ ಅಂಡ್ ಇನ್ಸ್ಟಿಟ್ಯೂಶ್ನಲ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮವು ಜರುಗಿತು. ಈ ಸಂಸ್ಥೆಯು ಭಾರತದ ಹಲವಾರು ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ಶೈಕ್ಷಣಿಕ ಮೌಲ್ಯದ ಗುಣಮಟ್ಟಗಳನ್ನು ಪರೀಕ್ಷಿಸಿ ಕೆಲವು ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಪ್ರಶಸ್ತಿ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಅಂತಹ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮಬೆಳಗಾವಿ ಜಿಲ್ಲೆಯಹುಕ್ಕೇರಿ ತಾಲೂಕಿನ,ನಿಡಸೋಶಿಯ ಎಸ್, ಎನ್, ಜೆ, ಪಿ,ಎಸ್. ಎನ್. ಎಮ್. ಎಸ್. ಟ್ರಸ್ಟಿನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಗುಣಮಟ್ಟದ ಶಿಕ್ಷಣ, ಎಕ್ಸಲೆಂಟ್ ಅಡ್ಮಿನಿಸ್ಟ್ರೇಷನ್ ಮತ್ತು ಸೋಶಿಯಲ್ ಕಂಟ್ರಿಬ್ಯುಶನ್ ಸ್ತರದಲ್ಲಿ “ಪ್ರೊಮಿಜಿಂಗ್ ಅಂಡ್ ಟ್ರಸ್ಟೆಡ್ ಡಿಗ್ರಿ ಕಾಲೇಜ್ ಆಫ್ ದ ಇಯರ್ 2024 ” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅದರಂತೆ “ಎಕ್ಸಲೆನ್ಸ್ ಇನ್ ಎಜ್ಯುಕೇಶನಲ್ ಸ್ಟ್ಯಾಂಡರ್ಡ್ ಅಡಾಪ್ಟಿಬಿಲಿಟಿ & ಇಂಪ್ಲಿಮೆಂಟೇಶನ್ ” ಎಂಬ ಮತ್ತೊಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಪ್ರಾಚಾರ್ಯರು ತಿಳಿಸಿರುತ್ತಾರೆ. ಈ ಪ್ರಶಸ್ತಿಯು ಎಲ್ಲರಿಗೂ ಹೆಮ್ಮೆ ಮತ್ತು ಗೌರವವನ್ನು ತಂದಿರುತ್ತದೆ.

ಸಂಸ್ಥೆಯ ಅಧ್ಯಕ್ಷರು ಹಾಗೂ ಶ್ರೀಮಠದ ಪೀಠಧಿಪತಿಗಳಾದಗಳಾದ ಶ್ರೀಮನ್ ನಿರಂಜನ ಜಗದ್ಗುರು ಪರಮಪೂಜ್ಯ ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿಗಳು ಹಾಗೂ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ನಿಜ ಲಿಂಗೇಶ್ವರ ಸ್ವಾಮೀಜಿಯವರು ಆಶೀರ್ವಾದಗಳೊಂದಿಗೆ ಗೌರವವನ್ನು ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಎಸ್ ಬಿ ಬೆಲ್ಲದ ಹಾಗೂ ಆಡಳಿತ ಮಂಡಳಿಯ ಸಲಹಾ ಸಮಿತಿಯ ಸದಸ್ಯರು ,ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಬಸವರಾಜ ಹಾಲಭಾವಿಯವರಿಗೆ ಮತ್ತು ಎಲ್ಲ ಉಪನ್ಯಾಸಕ, ಉಪನ್ಯಾಸಕಿಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

 

ವರದಿ : ಸದಾನಂದ ಎಚ್

error: Content is protected !!