ಮಕ್ಕಳು ಶಿಕ್ಷಕರ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು : MLC ಡಾ ಚಂದ್ರಶೇಖರ ಪಾಟೀಲ್

ಹುಮನಾಬಾದ : ನಗರದ ಸರಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ ನಡೆದ 2025-26ನೇ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ಅಡಗಿರುವ ನೈಜ ಪ್ರತಿಭೆ ಹೊರ ತೆಗೆಯುವ ಕಾರ್ಯ ಶಿಕ್ಷಕರು ಮಾಡಬೇಕು. ಜತೆಗೆ ಮಕ್ಕಳು ಕೂಡಾ ಬೋಧಕರ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಇದೆ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಡಾ ಸಿದ್ದು ಪಾಟೀಲ್ ಸೋಲು ಗೆಲುವು ಒಂದು ನಾಣ್ಯದ ಎರೆಡು ಮುಖಗಳು ಇದ್ದಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಸೋತರೆ ಕುಗ್ಗದೆ ಗೆದ್ದರೆ ಹಿಗ್ಗದೆ ಮುಂದುವರೆಯಬೇಕು ಜೋ ಜೀತಾ ವಹಿ ಸಿಕಂದರ್ ಎಂದರು.

ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್, ಪ್ರೀತಮ್ ಸಿಂಗ್ ಜಾಧವ, ಶಿಕ್ಷಕರ ಸಂಘದ ಅಧ್ಯಕ್ಷ ಶೇಕ್ ಮಹಿಬೂಬ್ ಪಟೇಲ್, ರವೀಂದ್ರ ರೆಡ್ಡಿ ಮಾಲಿ ಪಾಟೀಲ್, ಮುರ್ಗೆಂದ್ರ ಸಜ್ಜನ್ ಶೆಟ್ಟಿ, ರಾಜಪ್ಪ ಶಿಂಧೋಲ್ ಪಂಡಿತ್ ಕಲ್ಯಾಣಿ ಸೇರಿದಂತೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!