ವೃದ್ದೆಯ ಮೇಲೆ ಬಲತ್ಕಾರ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಿ ಕೆ.ಎಂ ಬಾರಿ

ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಗ್ರಾಮದ ವೃದ್ದೆಯ ಮೇಲೆ ಕಾಮುಕ ಅತ್ಯಾಚಾರ ಘಟನೆ ಬಗ್ಗೆ ಭಾರತೀಯ ಜನತಾ ಪಕ್ಷ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷರಾದ ಕೆ. ಎಮ್. ಬಾರಿ ತೀವ್ರವಾಗಿ ಖಂಡನೆಯನ್ನು ಮಾಡಿದ್ದಾರೆ. ಮನುಷ್ಯತ್ವ ಇರುವವರು ಇಂತಹ ಹೇಯ ಕೃತ್ಯವನ್ನು ಯಾರು ಕೂಡ ಸಹಿಸುವುದಿಲ್ಲ ಹೆಣ್ಣು ಮಕ್ಕಳಿಗೆ ಗೌರವ ನೀಡುವುದರ ಜೊತೆಗೆ ಇಂತ ಘಟನೆ ನಡೆಯದಂತೆ ಸಾರ್ವಜನಿಕರು ನಿಗಾ ವಹಿಸಬೇಕು. ನಮ್ಮ ತಾಲೂಕು ಶಾಂತಿ ಸೌಹಾರ್ದತೆಗೆ ಹೆಸರುವಾಸಿ ತಪ್ಪಿಸ್ಥ ಯಾರೇ ಆಗಲಿ ಅಂತ ಆದಷ್ಟು ಬೇಗ ಬಂಧಿಸಿ ದುಷ್ಟ ವ್ಯಕ್ತಿಗೆ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಅದೇ ರೀತಿ ತಾಲೂಕಿನಲ್ಲಿ ರಾತ್ರಿಯ ಸಮಯದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚು ಮಾಡಿ ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!