ಕಲಬುರ್ಗಿ : ರಾಜ್ಯ ವಕ್ಷ ಬೋರ್ಡ್ ಚುನಾವಣೆಯಲ್ಲಿ ಕಲಬುರಗಿ ಬಂದೆನವಾಜ್ ದರ್ಗಾದ ಸಜ್ಜಾದ ನಷೀನ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ (ಅಲಿಬಾಬಾ) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು ತಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಈ ಚುನಾವಣೆಯಲ್ಲಿಭರ್ಜರಿ ಗೆಲುವು ಸಾಧಿಸಿದ್ದಾರೆ.

 

ಈ ಚುನಾವಣೆಯಲ್ಲಿ ರಾಜ್ಯದ ಒಂದು ಸಾವಿರದ ಐವತ್ತೆಂಟು ಮುತ್ತುವಲ್ಲಿಗಳ ಮತಗಳಿದ್ದವು ಅದರಲ್ಲಿ ಆಲಿಬಾಬಾ ರವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಸುಮಾರು ಒಂದು ನೂರಾ ಐವತ್ತಕ್ಕಿಂತ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಆಲಿಬಾಬ್ ರವರು ವಕ್ಫಬೋರ್ಡ್‌ನ ಹೊಸ ಸದಸ್ಯರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

 

ಈ ಸಂದರ್ಭದಲ್ಲಿ ಆಲಿಬಾಬ್ ರವರು ಮಾತನಾಡಿ,ವಕ್ಫ ಬೋರ್ಡ್‌ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಕ್ಫ ಬೋರ್ಡ್‌ನನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದರು.

 

ಈ ಚುನಾವಣೆಯ ಫಲಿತಾಂಶದ ಬಗ್ಗೆ ವಕ್ಫ ಬೋರ್ಡ್ ಸದಸ್ಯರು ಹಾಗೂ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಆಲಿಬಾಬಾ ಅವ- ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

ಚುನಾವಣೆಯಲ್ಲಿ ಗೆದ್ದ ಬಗ್ಗೆ ಮಾತನಾಡಿದ ಆಲಿಬಾಬಾ ಅವರು ತಮ್ಮ ಮೇಲೆ ವಿಶ್ವಾಸವಿಟ್ಟ ಮುತುವಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಅವರು ವಕ್ಫ ಬೋರ್ಡ್‌ ಅಭಿವೃದ್ಧಿಗೆ ತಮ್ಮ ಎಲ್ಲಾ ಶಕ್ತಿಯನ್ನೂ ಮುಡುಪಾಗಿಡುವುದಾಗಿ ಹೇಳಿದರು.

 

ಈಗ ಆಲಿಬಾಬಾರವರು ವಕ್ಫ ಬೋರ್ಡ್‌ ಹೊಸ ಸದಸ್ಯರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಹಾಕಿಕೊಂಡ ಯೋಜನೆಗಳನ್ನು ಜಾರಿಗೊಳಿಸುವ ಕೆಲಸವನ್ನು ಪ್ರಾರಂಭಿಸಲಿದ್ದಾರೆ. ವಕ್ಫ ಬೋರ್ಡ್‌ ಅಭಿವೃದ್ಧಿಯಲ್ಲಿ ಆಲಿಬಾಬ್ ರವರು ಯಶಸ್ವಿಯಾಗಲಿ ಎಂದು ವಿಜಯಪುದ ಹಾಸಿಂಪೀರ್ ದರ್ಗಾದ ವಂಶಸ್ಥರಾದ ಸೈಯದ್ ಜೈನುಲ್ ಅಬಿದೀನ್ ಆಶಿಸಿದ್ದಾರೆ.

error: Content is protected !!