ಶ್ರೀ ದಾನಮ್ಮ ದೇವಿ ಎಜುಕೇಶನ್ ಟ್ರಸ್ಟ್ ದ, ಮದರ್ ಟಚ್ಚ್ ಕಿಂಡರ್ ಗಾರ್ಟನ್ ಸ್ಕೂಲ್ ಸಂಕೇಶ್ವರ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಅಜ್ಜ ಅಜ್ಜಿಯರ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು,,, ಮಕ್ಕಳಿಗೆ ಅಜ್ಜ ಅಜ್ಜಿಯರ ಕಥೆಗಳು ಮಾರ್ಗದರ್ಶನ ಸಂಸ್ಕಾರ ಎಲ್ಲವೂ ಅನುಕರಣೆವಾಗಲಿ ಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರಿ ಸಂಸ್ಕಾರವಂತ ಮಕ್ಕಳು ಆಗಲು ಹಾಗೂ ಇಂದಿನ ಆಧುನಿಕ ಯುಗದಲ್ಲಿ ಇದು ಅವಶ್ಯಕತೆ ಮತ್ತು ಈ ಕಾರ್ಯಕ್ರಮ ಮಾದರಿಯಾಗಿದೆ,, ಕಾರ್ಯಕ್ರಮದ ಮೊದಲಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ನಂತರ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಸಿಹಿ ಹಂಚಿ ಮಕ್ಕಳ ದಿನಾಚರಣೆ ಮಾಡಲಾಯಿತು, ಪ್ರಾಂಶುಪಾಲರಾದ ಪ್ರಿಯಾಂಕಾ ಗಡಕರಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ವಿವರಣೆಯನ್ನು ಹೇಳಿದರು, ಸಹನಾ ಕುಲಕರಣಿ ಪ್ರಮುಖ ಉಪಸ್ಥಿತಿ ಅರುನಾ ಜನಗೌಡ, ಪ್ರೇರಣಾ ಹಂಜಿ, ಸುರೇಖಾ ಸಂಸುದ್ದಿ, ಸವಿತಾ ಲಬ್ಬಿ, ಸಂಗೀತ ಮಾಂಗನೂರು, ಅಜ್ಜ ಅಜ್ಜಿಯರು ಪಾಲಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು,
ವರದಿ /ಸದಾನಂದ್ ಎಚ್