ಅಥಣಿ: ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಭಟನೆಕಾರರಿಗೆ ಲಾಠಿ ಚಾರ್ಜ್ ಖಂಡಿಸಿ ಅಥಣಿಯಲ್ಲಿ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಲಿಂಗಾಯತ ಭಾಂದವ್ಯರು ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕೋರಿ ಪ್ರತಿಭಟನೆ ಮಾಡಿದರುಲಾಠಿಚಾರ್ಜ ಖಂಡಿಸಿ ರಸ್ತೆ ಅಡ್ಡಗಟ್ಟಿ ತಡ್ದೆದು ,ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿಗರು..

 

ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ 2ಎ ಮೀಸಲಾತಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಪಂಚಮಸಾಲಿಗರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ತಾಲೂಕಿನ ಅಥಣಿ ಪಟ್ಟಣದಲ್ಲಿ ಪಂಚಮಸಾಲಿಯ ಸಮುದಾಯದವರು ರಸ್ತೆ ತಡೆದು ಆಕ್ರೋಶ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

 

ಪ್ರಾರಂಭದಲ್ಲಿ ಶಿವಯೋಗಿ ಸರ್ಕಲ್ ಹೋರಾಟಕ್ಕೆ ಚಾಲನೆ ನೀಡಲಾಯಿತು. ಅಥಣಿ ಪಟ್ಟಣದ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು.

 

ಬಳಿಕ ಪ್ರತಿಭಟನೆ ಕಾವು ಹೆಚ್ಚಾಗುತ್ತದಂತೆ ರಸ್ತೆ ತಡೆದು ಆಕ್ರೋಶ ರಾಜ್ಯ ಸರ್ಕಾರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.ಬಳಿಕ ಪ0ಚಮಸಾಲಿ ಸಮಾಜ ಮುಖ0ಡರಾದ ಧರೆಪ್ಪ ಟಕ್ಕಣ್ಣವರ 2a ಮೀಸಲಾತಿಗೆ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಿದೆ ಅದಲ್ಲದೆ ನಮ್ಮ ಸಮಾಚಾರ ಬಾಂಧವರ ಮೇಲೆ ಪೊಲೀಸರು ಲಾಟಿಚಾರ್ಜ್ ಮಾಡಿರುವುದನ್ನು ಖಂಡಿಸುತ್ತೇವೆಂದರು.

 

ಇದೇ ಸಂದರ್ಭದಲ್ಲಿ ಬಸವರಾಜ್ ಡಂಗಿ,ವಕೀಲರು ಸಂಘದ ಉಪಾಧ್ಯಕ್ಷಕರು ಮುರುಗೇಶ ಕುಮಟ್ಟಹಳ್ಳಿ,ರವಿ ಪೂಜಾರಿ,ರವಿ ಬಡಕಂಬಿ,ಮಲ್ಲಪ್ಪ ಹಂಚಿನಾಳ, ಅಣ್ಣಪ್ಪ ಕಿತ್ತೂರು, ಬಂಟೊಡ್ಕರ, ರಾಜೇಂದ್ರ ರಜಗಳೆ ಇನ್ನುಳಿದ ಸಮಾಜದ ಮುಖಂಡರು ಉಪಸ್ಥಿತಿ ಇದ್ದರು.

 

ವರದಿ : ಭರತೇಶ್ ನಿಡೋಣಿ 

error: Content is protected !!