ಬೀದರ್: ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಈ ಬಾರಿ ತಮ್ಮ ಜನ್ಮದಿನ (ಜ.29) ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದೆ. ರೈತರು ತೊಂದರೆಯಲ್ಲಿ ಇದ್ದಾರೆ. ಹೀಗಾಗಿ ಜನ್ಮದಿನ ಆಚರಿಸಿಕೊಳ್ಳದೇ ಇರಲು ನಿರ್ಣಯಿಸಿದ್ದೇನೆ ಎಂದು ವಿಜಯಸಿಂಗ್ ತಿಳಿಸಿದ್ದಾರೆ.
ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳು ಫ್ಲೆಕ್ಸ್, ಕಟೌಟ್, ಬ್ಯಾನರ್‍ಗಳನ್ನು ಅಳವಡಿಸಬಾರದು. ಹಾರ, ತುರಾಯಿಯೊಂದಿಗೆ ಬರಬಾರದು. ರೈತರು ಹಾಗೂ ಸರ್ವರ ಸಂಕಷ್ಟ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಬಲಿಗರು ಹಾಗೂ ಅಭಿಮಾನಿಗಳ ಶುಭ ಹಾರೈಕೆ ಸದಾ ತಮ್ಮೊಂದಿಗೆ ಇದೆ. ಅದುವೇ ತಮಗೆ ಜನ್ಮದಿನದ ಬಹು ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.
