ಹುಮನಾಬಾದ : ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಛಲ ಹಾಗೂ ಸತತ ಪ್ರಯತ್ನ ಇರಬೇಕು, ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ತಿಳಿಸಿದ್ದರು.
ಬುಧವಾರ ತಾಲ್ಲೂಕಿನ ಮಾಣಿಕನಗರ ಗ್ರಾಮದ ಸರಕಾರಿ ಕ್ರೀಡಾಂಗಣದಲ್ಲಿ 2024-2025ನೇ ತಾಲ್ಲೂಕು ಮಟ್ಟದ ನಿಲಯಾರ್ಥಿಗಳ ಕ್ರೀಡಾಕೂ ಉದ್ಘಾಟಿಸಿ ಮಾತನಾಡಿದವರು,
ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು.ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ವಿಶೇಷತೆ ಕಾಣುವ ಸಂದರ್ಭ ಇದಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಕರ ಸಹಿತ ಪಾಲಕರು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಪಂಚಶೀಲಾ ಸಿದ್ದಪ್ಪ, ತಾಲೂಕ ಪಶು ವದ್ಯಾಧಿಕಾರಿ ಡಾ. ಗೋವಿಂದ, ತಾಲೂಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು,
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಬುಳ್ಳಾ, ಶಾಲಾ ಮಕ್ಕಳು ಹಾಗೂ ಮತ್ತಿತರರು ಭಾಗಿಯಾಗಿದ್ದರು.