ಚಿಂಚೋಳಿ ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಆನಂದ ಟೈಗರ ಅಧ್ಯಕ್ಷತೆಯಲ್ಲಿ ಜರುಗಿತ್ತು. 23 ವಾರ್ಡ್ಗಳಲ್ಲಿ ಸಮಗ್ರ ಡಿ.ಪಿ.ಆರ್. ಪುರಸಭೆ ವ್ಯಾಪ್ತಿಯಲ್ಲಿ ವಸೂಲಾತಿಗಳಾದ, ಆಸ್ತಿ ತೆರಿಗೆ, 75% ನೀರಿನ ಕರ 12% & ಇನ್ನಿತರ ತೇರಿಗೆ ವಸೂಲಾತಿ, ಸಿದ್ಧ ಸಿರಿ ಕಾರ್ಖನೆಯ ಬಾಕಿ, ಮನೆಗಳು, ಶಾಲೆ, ಇತರ ಕಟ್ಟಡ, ಉಳಿದ ಆಸ್ತಿ ಪಾವತಿಸದೇ, ಎನ್, ಓ,ಸಿ, ಅನುಮತಿ ಪಡೆಯದೇ, ಇರುವುದಕ್ಕೆ ಕ್ರಮ ಕೈಗೊಂಡಿದ್ದಿರಿ, ಮತ್ತು ಕಟ್ಟಡಗಳ ಕೆಲಸವನ್ನು ನಿಲಿಸಿ, ಕಾನುನು ಕ್ರಮ ಜರುಗಿಸಬೇಕೆಂದು ಮುಖ್ಯಾಧಿಕಾರಿಗಳಿಗೆ ಸದ್ಯಸರು ಎಲ್ಲರೂ ಸೇರಿ ತರಾಟೆ ತೇಗೆದುಕೊಂಡರು, ಪುರಸಭೆ ಮುಖ್ಯಧಿಕಾರಿ ಕಾಶಿನಾಥ ಧನ್ನಿ, ಈಗಾಗಲೇ 3 ಬಾರಿ ನೋಟಿಸ್ ಜಾರಿ ಮಾಡಿದೆನೆ ಎಂದು ಹೇಳಿದರು. ಅದೇ ರೀತಿ ನೀರು ಶುದ್ದಿಕರಣ ಘಟಕ, ಬೀದಿ ದೀಪಗಳ ನಿರ್ವಹಣೆ, ಕಾಮಾಗಾರಿ ಹಾಗೂ ಸರ್ಕಾರದ ಸೌಲಭ್ಯ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು, ಪುರಸಭೆ ಸದಸ್ಯರು, ಪುರಸಭೆ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.