ಸರಿಗಮಪ ಗೆ ಆಯ್ಕೆಯಾದ ಕುಮಾರ ಅಮೋಘಪರ್ವ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಕುಮಾರ್ ಅಮೋಘ ಪರ್ವ ಸಂತೋಷ್ ದೇಶಪಾಂಡೆ ಈತನು ಸರಿಗಮಪ ಗೆ ಆಯ್ಕೆಯಾಗಿರುತ್ತಾನೆ…

ಬಾಲ್ಯ ಸ್ನೇಹಿತ ಆತ್ಮೀಯ ಗೆಳೆಯನ ಮಗನಾದ ಕುಮಾರ್ ಅಮೋಘ ಸಂತೋಷ ದೇಶಪಾಂಡೆ ಇವನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹಾಗೂ ಕರ್ನಾಟಕ ರಾಜ್ಯದ್ಯಂತ ಎಲ್ಲ ಜನರ ಮನ ಸೆಳೆಲಿ ಎಂದು 1994 95ನೇ ಸಾಲಿನ ವಿದ್ಯಾರ್ಥಿ ಬಳಗದವರ ವತಿಯಿಂದ ಕುಮಾರ್ ಅಮೋಘ ಈತನಿಗೆ ಮೈಸೂರು ಪೇಠಾ ಧರಿಸಿ ಶಾಲ ಮಾಲೆ ಎಂದಿಗೆ ಸಿಹಿಯನ್ನು ನೀಡಿ ಸತ್ಕರಿಸಲಾಯಿತು ಸರಿಗಮಪದಲ್ಲಿ ಅತಿ ಉತ್ತಂಗಕ್ಕೆ ಏರಬೇಕೆಂದು ಮತ್ತು ಎಲ್ಲ ಕರ್ನಾಟಕದ ಜನತೆಯ ಆಶೀರ್ವಾದ ಸದಾ ನಿನ್ನ ಮೇಲೆ ಇರಲೆಂದು 94 95ನೇ ಸಾಲಿನ ಸ್ನೇಹಿತರೆ ಎಲ್ಲರೂ ಸೇರಿ ಆಶೀರ್ವದಿಸಿದರು…

ಇದೇ ಸಂದರ್ಭದಲ್ಲಿ ಕುಮಾರ ಅಮೋಘಪರ್ವ ಮಾತನಾಡಿ ಸರಿಗಮಪ ಆಯ್ಕೆ ಆಗಿದ್ದಕ್ಕೆ ನನಗೆ ತುಂಬಾ ಹರ್ಷವಾಗಿದೆ ನಿಮ್ಮೆಲ್ಲರ ಆಸೆಯಂತೆ ನಾನು ಚೆನ್ನಾಗಿ ಹಾಡುತ್ತೇನೆ ಮತ್ತು ನಿಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಇದೇ ರೀತಿ ನಿಮ್ಮ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ… ಈ ಸಂದರ್ಭದಲ್ಲಿ ರಾಜು ಅಳವಾಡೇ. ಆನಂದ ತುಬಚಿ. ಬಸವರಾಜ ಪಟ್ಟಣಶೆಟ್ಟಿ. ಪ್ರಕಾಶ್ ಗುಡಿಸಿ. ಜಯಾನಂದ್ ಹಿರೇಮಠ. ಮಹೇಶ್ ಮುದುಕನ್ನವರ್ ಹಾಗೂ ಬಾಲ್ಯದ ಸ್ನೇಹಿತರು ಉಪಸ್ಥಿತರಿದ್ದರು..

ಸಂತೋಷ್ ಪ್ರಕಾಶ್ ದೇಶಪಾಂಡೆ ಬಂದೇಲ್ಲ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸಿದರು..

 

ವರದಿ ಸದಾನಂದ್ ಎಚ್

error: Content is protected !!