ದಿ.ಮರೆಮ್ಮ ಯಾಕಾಪೂರ ರವರ 69ನೇ ಪುಣ್ಯಸ್ಮರಣನೇ ದಿನಾಚಾರಣೆ ನಿಮಿತ್ಯ ವಿಧವೆ ಮಹಿಳೆಯರಿಗೆ ಯಾಕಾಪೂರ ಕುಟುಂಬಸ್ಥರಿಂದ ಸನ್ಮಾನ

ಚಿಂಚೋಳಿ ಚಂದಾಪುರ ಪಟ್ಟಣದ ಸಮಾಜ ಸೇವಕ ರಮೇಶ್ ಯಾಕಾಪುರ ರವರ ತಾಯಿ ದಿ. ಮರೆಮ್ಮ ಯಾಕಪೂರ 69 ನೇ ಪುಣ್ಯ ಸ್ಮರಣೆ ದಿನದ ಅಂಗವಾಗಿ ವಿಧವೆ ಮಹಿಳೆಯರಿಂದಲೇ ಪೂಜೆ ಮಾಡಿಸಿ ಮುತ್ತೈದು ಊಟವನ್ನು ಅವರಿಗೆ ಮಾಡಿಸಿ ಹೋಸ ಸೀರೆ, ಕುಪಸ್ಸಾ, ಶಾಲು ಮತ್ತು ಸನ್ಮಾನ ಸುಮಾರು 10 ವರ್ಷಗಳಿಂದ ನಿರಂತರವಾಗಿ ಮಾಡಿ ಕೊಂಡು ಬರುತ್ತಿದ್ದು ಸಾರ್ವಜನಿಕ ಪ್ರಶಂಸೆ ಗಳ ಅಭಿನಂದನೆ ಬಂದಿದ್ದು, ವಿಧವೆ ಅಪಶಕುನ ವಲ್ಲ ಅವರು ಯಾವುದೇ ತಪ್ಪನ್ನು ಮಾಡದಿದ್ದರೂ ಸಮಾಜ ಅವರನ್ನು ಅಪಶಕುನ ಎಂದು ನೋಡುತ್ತೆ. ಈ ದೃಷ್ಠಿ ಕೋನ ಬದಲಾಯಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಧರ್ಭದಲ್ಲಿ ಸಂಜೀವನ್ ಯಾಕಪುರ, ರಾಹುಲ ಯಾಕಪೂರ,ಯಾಕ ಪೂರ ಕುಟುಂಬಸ್ಥರು ಹಾಗೂ ಅವರ ಬಂದು ಬಳಗ ಮಿತ್ರರು ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!