ಜೀತ ದಾಳುಗಳ ಬಿಡುಗಡೆ ಬಿಡುಗಡೆ ಯಾದ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಹಾಗೂ ಸೌಲಭ್ಯ ಕಲ್ಪಿಸಲು ರೂಟ್ಸ್ ಫಾರ್ ಫ್ರೀಡಂ ಮನವಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಸಂಘಟನೆಯಿಂದ ಗುರುತಿಸಿರುವ ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ಮತ್ತು ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಒದಗಿಸಿ ಸರ್ಕಾರದ ಸೌಲಭ್ಯಗಳು ಕಲ್ಪಿಸಿ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸಲು ರೂಟ್ಸ್ ಫಾರ್ ಫ್ರೀಡಂ ಆಗ್ರಹ

ಶತಮಾನಗಳಿಂದ ಸಾಮಾಜಿಕ ಅಸಮಾನತೆಯ ತಾಪಕ್ಕೆ ಸಿಕ್ಕಿ ದೇಶದ ಮೂಲ ನಿವಾಸಿಗಳಾದ ದಲಿತರು ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು ರಚಿಸಿ ಹಲವಾರು ಹಕ್ಕುಗಳನ್ನು ಒದಗಿಸಿ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂದು ಸಂದೇಶ ನೀಡಿದರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳು ಕಳೆದರೂ ಜೀತ ಪದ್ಮತೆ ಎಂಬ ಪಿಡುಗು ಇಂದಿಗೂ ಜೀವಂತವಾಗಿದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಿದ್ಧಾಂತವನ್ನು ಮೈಗೂಡಿಸಿಕೊಂಡು ಜೀತ ಪದ್ಧತಿ ವಿನಾಶ ಮಾಡಲು ಹಗಲಿರಳು ಶ್ರಮಿಸುತ್ತಿರುವ ಜೀತದಾಳುಗಳ ವಿಮೋಚನೆಗಾಗಿ ಪಣತೊಟ್ಟಿರುವ ‘ರೂಟ್ಸ್ ಫಾರ್ ಫ್ರೀಡಂ (RFF) ಸಂಘಟನೆಯನ್ನು ಡಾ. ಗೋಪಾಲ್ ವಿ ಸ್ಥಾಪಿಸಿ ತುಳಿತಕ್ಕೊಳಗಾದ ಎಲ್ಲಾ ಜಾತಿಯ ಬಡವರು ಜೀತದಾಳುಗಳು, ವಲಸೆ ಕಾರ್ಮಿಕರು ಚಾಲಕಾರ್ಮಿಕರು ವಿದ್ಯಾರ್ಥಿಗಳು ಮಹಿಳೆಯರು ಮತ್ತು ಪೌರಕಾರ್ಮಿಕರ ಹಕ್ಕುಗಳಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ

ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಜೀತ ಪದ್ಧತಿ ರದ್ದತಿ 1976 ರ ಕಾನೂನು ಅಡಿಯಲ್ಲಿ RFF ಸಂಸ್ಥಾಪಕರಾದ ಡಾ. ಗೋಪಾಲ್. ವಿ ಮತ್ತು ಜೀತ ವಿಮುಕ್ತಿಗಾಗಿ ದುಡಿಯುತ್ತಿರುವ ಡಾ. ಜೀವಿಕ ರತ್ನಮ್ಮ ರವರುಗಳ ನೇತೃತ್ವದಲ್ಲಿ ಸಂಘಟನೆಯು ಕೆಲಸ ನಿರ್ವಹಿಸುತ್ತಿದೆ

ಹಾಲಿ ಜೀತದಾಳುಗಳಾಗಿ ಜೀತ ಪದ್ಧತಿಯಲ್ಲಿ ತೊಡಗಿಸಿಕೊಂಡು ದುಡಿಯುತ್ತಿರುವ 2016 ರಿಂದ 2019 ರ ತನಕ 71 ಮಂದಿ 2021 ರಿಂದ 2023 ರ ತನಕ 166 ಮಂದಿ ಒಟ್ಟು 237 ಮಂದಿ ಜೀತದಾಳುಗಳನ್ನು ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ ಸುಮಾರು ವರ್ಷಗಳು ಕಳೆದರೂ ಸಹ ಅಧಿಕಾರಿಗಳು ಗಮನಹರಿಸಿಲ್ಲ.

ಜೀತ ಪದ್ಧತಿ (ರದ್ರತೆ) ಕಾಯ್ದೆ 1976 ರ ಮತ್ತು ಕರ್ನಾಟಕ ಸರ್ಕಾರದ SOP ಪ್ರಕಾರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪವಿಭಾಗ ಅಧಿಕಾರಿಗಳಿಗೆ ಜೀತ ಪದ್ಧತಿ (ರದ್ರಶಿ) ಕಾಯ್ದೆಯಡಿ ಅಪರಾಧವಾಗಿದೆ ಎಂದು ಯಾವುದೇ ವ್ಯಕ್ತಿಯಿಂದ ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಹಾಗೂ ಮಾಧ್ಯಮ ಪತ್ರಿಕೆ ಮೂಲಕ ಜಿತ ಪ್ರಕರಣಗಳು ಕಂಡುಬಂದಲ್ಲಿ 24 ಗಂಟೆಯೊಳಗೆ ಜೀತದಾಳುಗಳನ್ನು ರಕ್ಷಣೆ ಮಾಡಿ ಬಿಡುಗಡೆ ಮಾಡುವ ಆದೇಶ ವಿದ್ದರೂ ಸರ್ಕಾರದ ಅಧಿಕಾರಿಗಳು ಅಧಿಕೃತವಾಗಿ ಪಾಲಿಸುತಿಲ್ಲ ರೂಟ್ಸ್ ಫಾರ್ ಫ್ರಿಡಂ ಸಂಘಟನೆ ತಾಲೂಕಿನಲ್ಲಿ ಗುರುತಿಸಿರುವ ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ನೀಡಿ ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನರ್ವಸತಿ ಒದಗಿಸಿ ಸರ್ಕಾರದ ಸೌಲಭ್ಯ ಕಲ್ಪಿಸಬೇಕೆಂದು ಹಾಗೂ ವಿವಿಧ ಹಾಕ್ಕೋತ್ತಾಯ ಈಡೇರಸಲು ಕೋರಿ ರೂಟ್ಸ್ ಫಾರ್ ಫ್ರೀಡಂ ವತಿಯಿಂದ ದಂಡಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.

ವರದಿ : ಸುನೀಲ್ ಎಂ ಚಿಂತಾಮಣಿ