2023/24 ರಲ್ಲಿ ಹಳ್ಳದ ಸಿಡಿ ದುರಸ್ತಿ ಕಾಮಗಾರಿ ಟೆಂಡರ್ ಆಗಿದ್ದು ಆದರೆ ಇದುವರೆಗೂ ಕಾಮಗಾರಿ ಮಾಡಿಲ್ಲ
ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಮಾರ್ಗವಾಗಿ ಬಸ್ಸಾಪುರ ಹಾರೋಗೇರಿ ಮುರುಡಿ ರಸ್ತೆ ರಸ್ತೆಯಲ್ಲಿರುವ ಹಳ್ಳದ ಸಿಡಿ ದುರಸ್ತಿ ಹೆಸರಿನ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದು ಒಂದು ವರ್ಷ ಗತಿಸಿದೆ ಆದರೆ ಮೊದಲು ಇಲ್ಲಿ ರಸ್ತೆ ಸರಿ ಇತ್ತು ಕಾಮಗಾರಿ ಮಾಡಲೆಂದು ಮಣ್ಣು ಹಾಕಿ ಸರಿಯಾಗಿದ್ದ ಕಾಂಕ್ರೀಟ್ನ ಕಿತ್ತು ಕಾಮಗಾರಿ ಮಾಡದೆ ಸರಿಯಾಗಿದ್ದ ರಸ್ತೆಯನ್ನ ಹದಗೆಡಿಸಿದ್ದು ಇದುವರೆಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕಾಮಗಾರಿಯನ್ನ ವಿಳಂಬ ಮಾಡಿದ್ದಾರೆ ಆದರೆ ಈಗ ನೀರು ಸತತವಾಗಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡೆತಡೆಯಾಗಿದ್ದು ಒಟ್ಟಾರೆಯಾಗಿ ನಾಗರಹಳ್ಳಿ ಮತ್ತು ಬೆಣ್ಣಿಹಳ್ಳಿ ಮಾರ್ಗ ಮಧ್ಯದಲ್ಲಿರುವ ಹಳ್ಳ ಹಾಗೂ ಶಿರೋಳದಿಂದ ಮುರುಡಿ ರಸ್ತೆಗೆ ಸಂಪರ್ಕಿಸುವ ಹಳ್ಳಗಳ ಸಿಡಿ ದುರಸ್ತಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆಗಿದ್ದು ಆದರೆ ಈಗ ಅಧಿಕಾರಿಗಳು ಹಣ ಇಲ್ಲ ಎಂದು ಹರಕೆ ಉತ್ತರ ನೀಡುತ್ತಿದ್ದಾರೆ ಸರಿಯಾಗಿದ್ದ ರಸ್ತೆಯನ್ನು ಕಿತ್ತುಹಾಕಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಆಗಿದ್ದು ಪ್ರಯಾಣಿಕರ ಪ್ರಯಾಣಕ್ಕೆ ಕಂಟಕವಾಗಿದೆ ಇನ್ನಾದರೂ ಎಚ್ಚೆತ್ತು ಅಧಿಕಾರಿಗಳು ಟೆಂಡರ್ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯಾಣಿಕರ ಆಗ್ರಹವಾಗಿದೆ