ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾಂತೇಶ ಕರೂಟಿ ಉಪಾಧ್ಯಕ್ಷರಾಗಿ ಚಂದಪ್ಪ ಹಿರೇಕುರುಬರ ಅವಿರೋಧ ಆಯ್ಕೆ

ಅಫಜಲಪುರ : ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾಂತೇಶ ಕರೂಟಿ ಹಾಗೂ ಉಪಾಧ್ಯಕ್ಷರಾಗಿ ಚಂದಪ್ಪ ಹಿರೇಕುರುಬರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮನೋಹರ ಅಥರ್ಗಾ ಘೋಷಣೆ ಮಾಡಿದರು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಟ್ಟು 12 ಸದಸ್ಯರ ಪೈಕಿ 11 ಸದಸ್ಯರು ಹಾಜರಿದ್ದರು

ವಿಜಯೋತ್ಸವ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮಣ್ಣೂರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ ಬಾಕೆ ಅವರ ನೇತೃತ್ವದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಬಿ ರಾಜು ಬೆನಕನಹಳ್ಳಿ ಸದಸ್ಯರಾದ ಬಸವರಾಜ ವಾಯಿ ದೇವಪ್ಪ ಲಾಳಸಂಗಿ ಶಿವಪ್ಪ ಕರೂಟಿ ಹಣಮಂತ ನಾವಾಡಿ ಮುಖಂಡರಾದ ರಾಚಪ್ಪ ಕೊಪ್ಪಾ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ ಬಸಣ್ಣ ಜಕಾಪೂರ ಶ್ರೀಮಂತ ಕಟ್ಟಿ ಸಿದ್ದುಮಾರಾಯ ಹಿರೇಕುರುಬರ ಸಿದ್ರಾಮ ಚಿಕ್ಕಮಣೂರ ಕಲ್ಲಪ್ಪ ಅಲ್ಲಾಪೂರ ಮಲಕಪ್ಪ ಪೂಜಾರಿ ಲಗಶೆಪ್ಪ ಭಾಸಗಿ ಮಲಕಣ್ಣ ಹೊಸೂರಕರ ಮಹಾದೇವಪ್ಪ ಅಲ್ಲಾಪೂರ ಮಲ್ಲಿಕಾರ್ಜುನ ಭತಗುಣಕಿ ವಿವೇಕಾನಂದ ಕೋಗಟನೂರ ಸಂತೋಷ ಅಲ್ಲಾಪೂರ ಶಾವರಸಿದ್ದ ಜಮಾದಾರ ಮಾಳಪ್ಪ ಸೇಜೂಳೆ ಬಾಬಾಸಾಹೇಬ ಕುಲಕರ್ಣಿ ದತ್ತು ಬಂಡಗಾರ ಕಾಶೀನಾಥ ಯಾದವಾಡ ಯಲ್ಲಾಲಿಂಗ ಬಂಡಗಾರ
ಮಹಾದೇವ ಪ್ಯಾಟಿ ಶರಣಪ್ಪ ನಾವದಗಿ ಸುಭಾಷ ಚಿಕ್ಕಮಣೂರ ಗುಳುರಾಯ ಬುರುಡ ಕಾಶೀನಾಥ ಜೇವೂರ ಶಿವಾನಂದ ಕಲಶೆಟ್ಟಿ ಯಲ್ಲಪ್ಪ ನಾಯಕೋಡಿ ಗಡ್ಡೆಪ್ಪ ಬಸ್ಸಿನಕರ ಸೇರಿದಂತೆ ಇತರರಿದ್ದರು

error: Content is protected !!