ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ 2025ರ ಹೊಸವರ್ಷದ ಕ್ಯಾಲಂಡರ್ ಬಿಡುಗಡೆ

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ(ರಿ) ಬೆಂಗಳೂರು ಎಚ್ ಜಿ ರಮೇಶ್ ಕುಣಿಗಲ್ ಸಂಸ್ಥಾಪಕ ಗೌರವಾಧ್ಯಕ್ಷರು ಹಾಗೂ ಚೆನ್ನಯ್ಯ ಮ. ವಸ್ತ್ರದ್ ನಾಯಕತ್ವದಲ್ಲಿ ಹೊಸ ವರ್ಷದ ಕ್ಯಾಲೆಂಡರನ್ನು ಕಲಬುರ್ಗಿ ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು ಹಾಗೂ ಸಂಘಟನೆಯ ಅಧ್ಯಕ್ಷರು,ಸರ್ಕಾರಿ ನೌಕರರು, ಸಾಹಿತಿಕಾರರು ಪತ್ರಕರ್ತರು ವಿವಿಧ ಸಮಾಜದ ಗಣ್ಯರು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಿರಿಯಾಣ ಪಿಎಸ್ಐ ಮಡಿವಾಳಪ್ಪ, ವಕೀಲ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಬಿಜೆಪಿ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಕೆ. ಎಂ.ಬಾರಿ, ಕಾಂಗ್ರೆಸ್ ಎಸ್ಸಿ ಸೆಲ್ ನ ಅಧ್ಯಕ್ಷ ಸಂತೋಷ್ ಗುತ್ತೇದಾರ್, ದಲಿತ ಸಮಾಜ ಹಿರಿಯ ಮುಖಂಡ ಆರ್ ಗಣಪತ್ ರಾವ್, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪುರಸ್ಕೃತ ಶಂಕರ್ ಜಿ ಹಿಪ್ಪರಗಿ,ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಗುತ್ತೇದಾರ್, ಕುರುಬ ಸಂಘ ತಾಲೂಕ ಅಧ್ಯಕ್ಷರಾದ ಹನುಮಂತ ಪೂಜಾರಿ, ಉದಯಕಾಲ ಉದಯವಾಹಿನಿ ಪತ್ರಕರ್ತರಾದ ಮಹಬೂಬ್ ಷಾ ಅಣವಾರ, ವಿಶ್ವ ವಾಣಿ ವರದಿಗಾರ ವೆಂಕಟೇಶ ದುದ್ಯಾಲ್, ಮಡಿವಾಳ ಸಮಾಜದ ಕಾರ್ಯದರ್ಶಿ ಕಿರಣ್, ಆರ್‌ಟಿಐ ಅಧ್ಯಕ್ಷರಾದ ಅನಿಲ್ ಬಿರಾದಾರ್ ಕಾರ್ಯದರ್ಶಿ ಹಾಗೂ ವಕೀಲರಾದ ಸೂರ್ಯಕಾಂತ್ ಗಾರಂಪಳ್ಳಿ, ಬಂಜಾರ ಸಮಾಜ ಮುಖಂಡರಾದ ಸಚಿನ್ ರಾಠೋಡ್, ಇತರರು ಉಪಸ್ಥಿತರಿದ್ದರು

error: Content is protected !!