ಮುಂಡರಗಿ : ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ ಬಿ ಆರ್ ಅಂಬೇಡ್ಕರ್ ದಲಿತ ಚಳುವಳಿಯ ಸಂಘಟನೆಯವರು ಮುಂಡರಗಿ ತಾಲೂಕಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕಾಗಿ ಖರೀದಿಸಿದ ಭೂಮಿಯನ್ನು ಉಳುಮೆ ಮಾಡಿಸಿಕೊಂಡು ದುರುಪಯೋಗ ಮಾಡಿಕೊಂಡು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ನೀಡಿರುವ ಭೂಮಿಯನ್ನು ಕಟ್ಟಡ ನಿರ್ಮಾಣ ಮಾಡಬೇಕು ಆದರೆ ಶಾಲೆಯ ಮುಖ್ಯೋಪಾಧ್ಯಾಯರು ಜಮೀನನ್ನು ರೈತರು ಬಿತ್ತಲಿಕ್ಕೆ ಸ್ವತಃ ತಾವೇ ಅವಕಾಶ ಮಾಡಿಕೊಟ್ಟಿದ್ದು ಈಗ ಇದು ಸಂಘಟನೆ ಗಮನಕ್ಕೆ ಬಂದ ಮೇಲೆ ನಮಗೆ ಗೊತ್ತಿಲ್ಲ ಎಂದು ಹರಕೆ ಉತ್ತರ ನೀಡುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಜಾಗ ದುರ್ಬಳಿಕೆಯಾಗುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಅವರನ್ನ ಕೆಲಸದಿಂದ ವಜಾ ಮಾಡಬೇಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದುರ್ಬಳಕೆ ಪ್ರಕರಣ ದಾಖಲಿಸಿ ಸರ್ಕಾರದ ಭೂಮಿ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳಿಗೆ ಪಾಠ ಕಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ದಲಿತ ಸಂಘಟನೆಗಳಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯ ಮೂಲಕ ಲಕ್ಷ್ಮಣ ತಗಡಿನಮನಿಯವರು ಆಗ್ರಹಿಸಿದರು.