ಗಂಗಾವತಿ = ಹೈದರಾಬಾದನಲ್ಲಿ ದಿನಾಂಕ 7.2.2025 ರಂದು ನಡೆಯುವಂತಹ ಒಳ ಮೀಸಲಾತಿ ಹೋರಾಟ. ಪದ್ಮಶ್ರೀ ಮಂದಕೃಷ್ಣ ಮಾದಿಗ ಇವರ ನೇತೃತ್ವದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅಂತಿಮ ತೀರ್ಪು ನೀಡಿ ಸುಮಾರು ಐದು ತಿಂಗಳು ಗತಿಸಿದರು ಆಳುವಂತ ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ತೀರ್ಪನ್ನು ಗಾಳಿಗೆ ತೂರಿ ಸಮಯವನ್ನು ಕಾಲಹರಣ ಮಾಡುತ್ತಿರುವುದು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ. ಎಂದು ಗಂಗಣ್ಣ ಸಿದ್ದಾಪುರ ಜಿಲ್ಲಾ ಕಾರ್ಯಧ್ಯಕ್ಷರು ಹೇಳಿದರು ಅವರು ಹೈದ್ರಾಬಾದ್ ನಲ್ಲಿ ನಡೆಯುವಂತ ಒಳ ಮೀಸಲಾತಿ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ
ನಮ್ಮನು ನಾಳುವಂತಹ ಸರ್ಕಾರಗಳು ಸರ್ಕಾರಗಳು ಸಮಯದೊಳಗಡೆ ತೆಗೆದುಕೊಂಡು ಒಳ ಮಿಸಲಾತಿಯನ್ನು ಸಚಿವ ಸಂಪುಟಕ್ಕೆ ತಂದು ಅಂಗೀಕರಿಸಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಅನುಗುಣದ ಆಧಾರವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಿ ಅನ್ಯಾಯವಾದ ಸಮುದಾಯಗಳಿಗೆ ನ್ಯಾಯವನ್ನು ಒದಗಿಸಿ. ಒಳ ಮೀಸಲಾತಿ ಜಾರಿಗೆಗಾಗಿ ಒತ್ತಾಯಿಸಿ ದಿನಾಂಕ 7.2.2025 ರಂದು ಪದ್ಮಶ್ರೀ ಮಂದಕೃಷ್ಣ ಮಾದಿಗ
ರವರ ನಾಯಕತ್ವದಲ್ಲಿ ಹೈದರಾಬಾದ್ ನಗರದಲ್ಲಿ ಸಾವಿರಾರು ಧ್ವನಿಗಳು ಲಕ್ಷಾಂತರ ತಮಟೆಗಳು ಎಂಬ ಕಲಾ ಸಂಸ್ಕೃತಿಕ ಹೋರಾಟವನ್ನು ಲಕ್ಷಾಂತರ ಜನರೊಂದಿಗೆ ದೇಶದಲ್ಲಿ ವಿನೂತನ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಹೋರಾಟಕ್ಕೆ ಕರ್ನಾಟಕದಿಂದ ಸಾವಿರಾರು ಮಾದಿಗ ದಂಡೋರ ಕಾರ್ಯಕರ್ತರು ಬುದ್ಧಿಜೀವಿಗಳು ಹಿರಿಯರು ಹೋರಾಟಗಾರರು ವಿದ್ಯಾರ್ಥಿಗಳು ವಿವಿಧ ರಾಜಕೀಯದಲ್ಲಿ ಗುರುತಿಸಿಕೊಂಡ ನಮ್ಮ ಮಾದಿಗ ಸಮುದಾಯದ ನಾಯಕರು ತಪ್ಪದೆ ಹೈದರಾಬಾದ್ ನಗರಕ್ಕೆ ತಮಟೆಯೊಂದಿಗೆ ಆಗಮಿಸಲು ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರ ಕರೆ ನೀಡಲಾಗಿದೆ.
ಮಂದಕೃಷ್ಣ ರವರ ಸುಮಾರು 30 ವರ್ಷಗಳಿಂದ ನೊಂದ ಬೆಂದ ಸಮುದಾಯದ ಸಾಮಾಜಿಕ ನಾಯಕ್ಕಾಗಿ ಮತ್ತು ಜನಪರ ಹೋರಾಟವನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುವುದನ್ನು ಕರ್ನಾಟಕ ಮಾದಿಗ ದಂಡೋರ ನಮ್ಮ ಸಮುದಾಯದ ವತಿಯಿಂದ ಪ್ರಶಸ್ತಿ ನೀಡಿದ ಕೇಂದ್ರ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತಿದ್ದೇವೆ. ಮತ್ತು ಅದೇ ರೀತಿಯಾಗಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಕೊಪ್ಪಳ ಜಿಲ್ಲೆಯ ಜಿಲ್ಲಾದಂತ ಮಾದಿಗ ಸಮುದಾಯದ ಯುವಕರು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಈ ಪತ್ರಿಕಾ ಪ್ರಕಟಣೆ ಮೂಲಕ ಎಲ್ಲಾ ಮುಖಂಡರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು. ಕೊಪ್ಪಳ ಜಿಲ್ಲಾ ಅಧ್ಯಕ್ಷರು ಕೆ ಸುಭಾಸ್ ಕನಕಗಿರಿ, ಜಿಲ್ಲಾ ಉಪ ಅಧ್ಯಕ್ಷರು ಮೂರ್ತಿ ಸಂಗಾಪುರ,ಗಂಗಾವತಿ ತಾಲೂಕು ಅಧ್ಯಕ್ಷರು ಮಹದೇವ್ ಬಡಿಗೇರ,ಕಾರಟಗಿ ತಾಲೂಕ್ ಅಧ್ಯಕ್ಷರು ಶಿವಣ್ಣ ಈಳಿಗನೂರ್ ಕನಕಗಿರಿ ತಾಲೂಕು ಅಧ್ಯಕ್ಷರು ದುರುಗೇಶ್ ಕಂದಕೂರ ಮತ್ತು ಕೊಪ್ಪಳ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಸೇರಿ ಸಾವಿರಾರು ಜನಸಂಖ್ಯೆಯಲ್ಲಿ ಹೈದ್ರಾಬಾದ್ ಬರಬೇಕೆಂದು ವಿನಂತಿಸುತ್ತೇವೆ ಎಂದರು.