ರಾಜ್ಯದ ಮುಂದಿನ ಮುಖ್ಯಮಂತ್ರಿ ಬಸವರಾಜ ಪಾಟೀಲ ಯತ್ನಾಳ ಆಗಲಿ : ಭಾಗ್ಯವಂತ ಶಾರದ

ಚಿಂಚೋಳಿ : ಹೊರವಲಯದ ಸಿದ್ದ ಸಿರಿ ಎಥೆನಾಲ್ ಪವರ್ ಲಿಮಿಟೆಡ್ ಮಾಲೀಕರಾದ ಬಸವರಾಜ ಪಾಟೀಲ ಯತ್ನಾಳ ಅವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
ಭಾಗ್ಯವಂತ ಶಾರದ ಜೈ ಕನ್ನಡಿಗರ ಸೇನೆ ತಾಲೂಕ ಅಧ್ಯಕ್ಷ ಮಾತನಾಡಿ ಪತಿ ವರ್ಷದಂತೆ ಈ ವರ್ಷವೂ ಕೂಡ ಬಸವರಾಜ ಪಾಟೀಲ್ ಯತ್ನಾಳ್ರವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ಈ ಬಾರಿ ಬಡ ಜನರಿಗೆ ಉಪಯೋಗವಾಗುವಂತಹ ವಿಪರೀತ ಚಳಿ ಇರುವುದರಿಂದ ಅವರಿಗೆ ಹೊದಿಕೆ(ರಗ್ಗು) ಗಳನ್ನು ವಿತರಣೆ ಮಾಡಿದ್ದೇವೆ, ಯತ್ನಾಳ ರವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಹೇಳಿದರು.
ತಾಲೂಕು ಬಿಜೆಪಿ ವಕ್ತಾರರಾದ ಶ್ರೀಮಂತ ಕಟ್ಟಿಮನಿ ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ತಾಲೂಕು ಹಿಂದುಳಿದಿದ್ದು ಯತ್ನಾಳ್ರವರು ಈ ಕಾರ್ಖಾನೆ ಪ್ರಾರಂಭಿಸಿದ ಮೇಲೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ನಾಂದಿ ಹಾಡಿದ್ದಾರೆ. ಯುವ ಜನತೆಗೆ ಕೆಲಸ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಿದ್ದಸಿರಿ ಎಥನಾಲ್ ಪವರ್ ಲಿಮಿಟೆಡ್ ಕಾರ್ಖಾನೆ ಸಹಕಾರಿಯಾಗಿದೆ. ತಾಲೂಕು ಅಭಿವೃದ್ಧಿಗೊಳ್ಳಲು ಯತ್ನಾಳದವರು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದಾರೆ ತಾಲೂಕು ಅಭಿವೃದ್ಧಿ ಪಥದತ್ತ ನಡೆಯುತ್ತಿದ್ದು ಇದಕ್ಕೆ ಮೂಲ ಕಾರಣವೇ ಯತ್ನಾಳ್ ರವರು ಎಂದು ಹೇಳಿದರು.

ಸೋಮಶೇಖರ ಐನೊಳ್ಳಿಕರ್ ಅವರ ವತಿಯಿಂದ ಬಡ ಹೆಣ್ಣು ಮಕ್ಕಳಿಗೆ ಹೊದಿಕೆ(ರಗ್ಗು) ಗಳನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ ಎಂ ಬಾರಿ, ಹಣಮಂತ ಪೂಜಾರಿ, ದಲಿತ ಮುಖಂಡ ಸೋಮಶೇಖರ ಐನೊಳ್ಳಿಕರ್. ಸಂಪತ್ ಕಟ್ಟಿ ಸಚಿನ, ಪ್ರದೀಪ ಮಾಳಗಿ, ಅಶೋಕ ಬೊಮ್ಮನಹಳ್ಳಿ, ಹಾಗೂ ಯತ್ನಾಳ ಅವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!