ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವಲ್ಲಿ ಅಡುಗೆದಾರರ ಪಾತ್ರ ಮುಖ್ಯ ರುದ್ರಪ್ಪ ಹುರುಳಿ

ರೋಣ: ಇತ್ತೀಚಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವು ಅನೇಕ ಮಕ್ಕಳಿಗೆ ನೀಡುವ ಆಹಾರ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು.

ಅವುಗಳನ್ನು ಸಮರ್ಪಕವಾಗಿ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಅಡಿಗೆದಾರರು ಸ್ವಚ್ಛತೆ ಕಡೆಗೆ ಗಮನ ಕೊಟ್ಟು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಅಡಿಗೆದಾರರ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ರುದ್ರಪ್ಪ ಹುರುಳಿ ಅವರು ಗುರುಭವನದಲ್ಲಿ ಜರಗಿದ ಅಡುಗೆ ಸಿಬ್ಬಂದಿಯವರ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಶುದ್ಧವಾದ ನೀರು ಉತ್ತಮ ಪರಿಸರದಲ್ಲಿ ಅಡಿಗೆಯವರು ಮಕ್ಕಳಿಗೆ ಆಹಾರ ತಯಾರು ಮಾಡಬೇಕಾಗಿರುತ್ತದೆ ಈ ನಿಟ್ಟಿನಲ್ಲಿ ಅಡುಗೆ ಕೋಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ಕೊಟ್ಟು ವಿದ್ಯಾರ್ಥಿಗಳ ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಅವರು ಹೇಳಿದರು.

 

ಈ ವೇಳೆ ಅಗ್ನಿಶಾಮಕ ಇಲಾಖೆಯ ಮುತ್ತಣ್ಣ ಪ್ರಧಾನಿ ಇವರಿಂದ ಗ್ಯಾಸ್ ಸಿಲಿಂಡರ್ ನ ಬಳಿಕೆ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ತಾಲೂಕ ಸಹಾಯಕ ಅಕ್ಷರ ದಾಸೋಹ ಅಧಿಕಾರಿ ಆರ್. ಎಲ್. ನಾಯ್ಕರ. ತಾಪಂ ಇಓ ಚಂದ್ರಶೇಖರ ಕಂದುಕೂರ. ಸರಸ್ವತಿ ಕನವಳ್ಳಿ. ಶಿಕ್ಷಣಾಧಿಕಾರಿಗಳು ಅಕ್ಷರ ದೋಸೂಹ ಕಾರ್ಯಕ್ರಮ ಗದಗ.

ಎಂ.ಎ ಫಣಿಬಂದ ಸಮನ್ವಯಾಧಿಕಾರಿಗಳು ಬಿ.ಆರ್. ಸಿ.ರೋಣ. ಬಿ.ಎನ್  ಕ್ಯಾತನಗೌಡರ. ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರೋಣ. ಡಾ//ಕೆ.ಎ. ಹಾದಿಮನಿ ತಾಲೂಕ ಆರೋಗ್ಯ ಅಧಿಕಾರಿಗಳು ರೋಣ ತಾಲೂಕ ಮಟ್ಟದ ಎಲ್ಲಾ ಅಡುಗೆದಾರರು ಇದ್ದರು.

error: Content is protected !!