ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಕಡಲೆ ಬೆಲೆ 6800.ರಿಂದ.6900.ಸಾವಿರ ರೂಪಾಯಿಗೆ ಮಾರಾಟವಾಗಿತ್ತು,
ಈ ವೇಳೆಯಲ್ಲಿ ಕೇಂದ್ರ ಸರ್ಕಾರ ಮಾಡಿದ್ದೇನೆ ಖಾಸಗಿ ಮಾರುಕಟ್ಟೆಯಲ್ಲಿ ಹಾಗೂ ಹಳ್ಳಿಯಲ್ಲಿ ದಲ್ಲಾಳಿಗಳು ಖರೀದಿಸುವ ಬೆಲೆಕಿಂತ ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ 5650.ಸಾವಿರ.ರೂಪಾಯಿ ಅಂತೆ ಕಡಿಮೆ ಬೆಲೆಯನ್ನು ಘೋಷಣೆ ಮಾಡಿ ಈ ಸರ್ಕಾರದ ಮುಖ್ಯಮಂತ್ರಿಗಳು ಸ್ಥಳೀಯ ಜನಪ್ರತಿನಿಧಿಗಳು ರಾಜ್ಯದ ಅನ್ನದಾತರಿಗೆ ಅನ್ಯಾಯ ಮಾಡಿದ್ದಾರೆ.
ಹೌದು ಈ ರಾಜ್ಯದ ರೈತರು ಬೆಳೆದಿರುವ ಯಾವುದೇ ಬೆಳೆಗಳಾದರೂ ಕೂಡ ಯಾವಾಗಲೂ ಮಾರುಕಟ್ಟೆಯಲ್ಲಿ ಖರೀದಿಸುವ ಬೆಲೆಕಿಂತ ಹೆಚ್ಚಿನ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರದಲ್ಲಿ ಆಗಬೇಕಿತ್ತು ಆದರೆ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಬೆಂಬಲ ಬೆಲೆಯಲ್ಲಿ ಹೆಚ್ಚಳ ಆಗಿಲ್ಲ ಎಂದರು,
ಕೇಂದ್ರ ಸರ್ಕಾರ ರೈತರ ಕಡಲೆಯನ್ನು ಖರೀದಿಸಬೇಕು ಅಂತ
ಕಾನೂನಿನಲ್ಲಿ ಇದ್ದರೂ ಕೂಡ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇದನ್ನು ಮಾಡಬೇಕಿತ್ತು ಇದನ್ನು ಮಾಡಿಲ್ಲ
ಇವರಿಗೆ ಗೊತ್ತಿದ್ದು ಗೊತ್ತಿಲ್ಲದಂತೆ ರಾಜ್ಯದ ರೈತರಿಗೆ ಅನ್ಯಾಯ ಮಾಡಿರುವ. ಈ ಸರ್ಕಾರದ ಪ್ರತಿನಿಧಿಗಳನ್ನು ರೈತರು ಇವರನ್ನು ಹೆಗೆ ನಂಬಬೇಕು
ಈ ವೇಳೆಯಲ್ಲಿ ಕೇಂದ್ರ ಸರ್ಕಾರ ಕಡಿಮೆ ಮಾಡಿರುವು ಬೆಲೆಯನ್ನು ರದ್ದುಗೊಳಿಸಿ 8.ರಿಂದ9.000.ಸಾವಿರ.ರೂಪಾಯಿ ಅಂತೆ ಘೋಷಣೆ ಮಾಡಿ.
ರೈತರ ಕಡಲೆ ಕಾಳನ್ನು ಶೀಘ್ರದಲ್ಲಿ ಖರೀದಿಸುವಂತೆ
ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರ ನೇತೃತ್ವದಲ್ಲಿ ಒತ್ತಾಯಿಸಿ ಕೊಪ್ಪಳ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಪಾರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಇವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಮನವಿ ಸ್ವೀಕರಿಸಿದ ಅಪಾರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ ಇವರು ನಿಮ್ಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳಿಸಿಕೊಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರಾದ ರಾಜಶೇಖರ ಕಟ್ಟಿ. ಬಸವರಾಜ ಯೋಗಪ್ಪನವರು.ಈರಣ್ಣ ಮರಡಿ.ಬಸವರಾಜ ಮೇಟಿ. ಇನ್ನಿತರರು ಉಪಸ್ಥಿತರಿದ್ದರು.