ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆಯಾದ ಸದಸ್ಯರಿಗೆ ಬೇಟಿ

ಹುದಲಿ : ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಹಾಗೂ ಶಾಸಕರಾದ ಶ್ರೀ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರನ್ನು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಗ್ರಾಮದ ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಹೊಸ ಅಧ್ಯಕ್ಷರಾಗಿ ಶ್ರೀ ಚಂದ್ರಕಾಂತ್ ಕಾಡಪ್ಪ ತೋಟಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಪ್ರಕಾಶ್ ದೇಶಪಾಂಡೆ ಆಯ್ಕೆಯಾದ ಹಿನ್ನಲೆಯಲ್ಲಿ, ಸಂಘದ ಸದಸ್ಯರು ಮತ್ತು ಮುಖಂಡರು ಭೇಟಿಯಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು

1937ರಲ್ಲಿ ಮಹಾತ್ಮಾ ಗಾಂಧೀಜಿ ಸ್ವತಃ ಸ್ಥಾಪನೆ ಮಾಡಿದ ಈ ಸಂಘವು ಹುದಲಿ ಗ್ರಾಮದಲ್ಲಿ ಖಾದಿ ಹಾಗೂ ಗ್ರಾಮೋದ್ಯೋಗ ಗ್ರಾಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತ ಬಂದಿದೆ. ಈ ಸಂದರ್ಭದಲ್ಲಿ ಸದಸ್ಯರು ಮತ್ತು ಮುಖಂಡರು ಹೊಸ ನೇತೃತ್ವಕ್ಕೆ ಶುಭಹಾರೈಸಿ, ಸಂಘವನ್ನು ಮತ್ತಷ್ಟು ಶಕ್ತಿಶಾಲಿ ಹಾಗೂ ಜನಸೇವೆಗೆ ಅಗ್ರಗಣ್ಯವಾಗಿ ಬೆಳೆಸಲು ಮಾರ್ಗದರ್ಶನ ನೀಡಿದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಹಾಗೂ ಅವರ ಆಪ್ತ ಸಹಾಯಕರಾದ ಶ್ರೀ ಅರವಿಂದ್ ಅಣ್ಣಾ ಕಾರ್ಚಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

ವರದಿ : ಸದಾನಂದ ಎಂ

error: Content is protected !!