ಗೋಗಳಿಗೆ ನೀರಿಲ್ಲ, ಮೇವಿಲ್ಲ, ಸ್ವಚ್ಛತೆಯೂ ಇಲ್ಲ ದಂಗಾದ‌ ನ್ಯಾಯಾಧೀಶರು

ಗೋ ಶಾಲೆಯ ಅವ್ಯವಸ್ಥೆ ಕಂಡು ನ್ಯಾಯಾಧೀಶರು ತರಾಟೆ

ಔರಾದ್ : ಇಲ್ಲಿನ ಅಮರೇಶ್ವರ ಗೋ ಶಾಲೆಗೆ ಈಚೇಗೆ ದಿಢೀರ್ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ ಸಾಬ್ ಯಾದವಾಡ ಅವರು ಅವ್ಯವಸ್ಥೆ ಕಂಡು ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಜಾನುವಾರುಗಳ ಸ್ಥತಿ ಪರಿಶೀಲಿಸಿದ ಅವರು ನೀವುಗಳು ಮನುಷ್ಯರು ತಾನೆ ಜಾನುವಾರುಗಳು ಎಷ್ಟು ಸೊರಗುತ್ತಿವೆ. ಇದು ಕೊಟ್ಟಿಗೆಯೇ ಎಂದು ಅಸ್ವಚ್ಛತೆ ಕಂಡು ಸಿಡಿಮಿಡಿಕೊಂಡರು. ನಿಮ್ಮ ಮನೆಯ ಜಾನುವಾರುಗಳಾದರೇ ಹೀಗೆ ನೋಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ ಅವರು ಕೊಟ್ಟಿಗೆ ಗಬ್ಬು ನಾರುತ್ತಿದೆ. ಯಾರೇ ಬಂದರೂ ನೋಡಿದ ಜಾನುವಾರುಗಳು ಹಸುವಿನಿಂದ ಚಡಪಡಿಸುತ್ತಿವೆ. ಆದರೆ ನಿಮ್ಮಗೆ ಮಾತ್ರ ಜಾನುವಾರುಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎನ್ನುವದು ಗೊತ್ತಾಗುತ್ತಿದೆ ಎಂದು ದೂರಿದರು.

ಗೋ ಶಾಲೆಯಲ್ಲಿ ಇಲ್ಲಿಯವರೆಗೆ ಎಷ್ಟು ಜಾನುವಾರುಗಳು ಬಂದಿವೆ. ಈ ಪೈಕಿ ಎಷ್ಟು ಜಾನುವಾರುಗಳ ಮಾರಾಟ ಮಾಡಲಾಗಿದೆ. ಮೃತಪಟ್ಟ ದನಗಳ ಸಂಖ್ಯೆ ಸೇರಿದಂತೆ ಮೇವು, ನೀರಿನ ಸಮಸ್ಯೆ ಸೇರಿದಂತೆ ಸರಕಾರದ ನೀಡಿರುವ ಅನುದಾನದ ಬಗ್ಗೆ ಎಲ್ಲವೂ ಮಾಹಿತಿ ಕೇಳಿದರು. ಇದಕ್ಕೆ ಎಲ್ಲವೂ ಗೋ ಶಾಲೆ ಅಧ್ಯಕ್ಷ ಶಿವರಾಜ ಅಲಮಾಜೆ ಬಳಿಯಲ್ಲಿಯೇ ಇವೆ ಎಂದು ಸಿಬ್ಬಂದಿ ತಿಳಿಸಿದರು. ಇದರಿಕೊಂಡ ಕೋಪಗೊಂಡ ನ್ಯಾಯಾಧೀಶರು ಎಲ್ಲವೂ ಗೋ ಶಾಲೆಯಲ್ಲಿ ಇರಬೇಕು. ಎಲ್ಲ ಮಾಹಿತಿ ಕೋರ್ಟ್ ಗೆ ಸಲ್ಲಿಸಲು ಸೂಚಿಸಿದರು.

ಗೋ ಶಾಲೆಯ ವ್ಯವಸ್ಥೆ, ಎಲ್ಲ ಕಡೆಯೂ ಕಂಡು ಬಂದ ಅಸ್ವಚ್ಛತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಜಾನುವಾರುಗಳು ನಿತ್ಯ ನೀರು ಹಾಗೂ ಮೇವಿನ ಸಮಸ್ಯೆಯಿಂದ ಸೊರಗುತ್ತಿವೆ ಇದರ ಶಾಪ ನಿಮ್ಮನ್ನು ಬಿಡದು ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ನೀರಿನ ಸಮಸ್ಯೆಯಿದೆ. ಒಣ ಮೇವು ಮಾತ್ರವಿದೆ. ಹಸಿ ಮೇವು ಜಾನುವಾಗುಗಳಿಗೆ ಅಗತ್ಯವಿದೆ ಎಂದು ಕೆಲವರು ನ್ಯಾಯಾಧೀಶರ ಗಮನಕ್ಕೆ ತರುತ್ತಿದಂತೆ ಜಾನುವಾರುಗಳಿಗೆ ಯಾಕೆ ನಿತ್ಯ ಹೊಟ್ಟೆ ತುಂಬಾ ಮೇವು ಹಾಕುವದಿಲ್ಲವೆಂದು ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ನಿತ್ಯ ಜಾನುರಾವುಗಳು ನೀರಿಗಾಗಿ ಹಾಗೂ ಮೇವಿಗಾಗಿ ಪರದಾಡುತ್ತಿವೆ. ಆದರೂ ಸಂಬಂಧಿಸಿದವರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವದು ಸರಿಯಾದ ಕ್ರಮವಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಡಬೇಕಿದೆ. ಆದರೆ ಅವರುಗಳೇ ಇದರ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ ಎಂದು ಅಸಮಧಾನ ವ್ಯಕ್ತಪಡಿಸಿದರ‌ ನ್ಯಾಯಾಧೀಶರು ಕುಡಲೇ ಇದರ ಸಂಪೂರ್ಣ ದಾಖಲೆಗಳು ಸಲ್ಲಿಸುವಂತೆ ಸೂಚಿಸಿದರು.

error: Content is protected !!