ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 218ರ ಹುಬ್ಬಳ್ಳಿ ವಿಜಯಪುರದ ಕೋರ್ತಿ ಕೊಲ್ಹಾರ ಕೃಷ್ಣಾ ನದಿ ಸೇತುವೆ ಮೇಲಿಂದ ಹಾಯವಾ ಟಿಪ್ಪರ್ ಕೆಳಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಸಾಯಂಕಾಲ ಸಂಭವಿಸಿದೆ.
ಬೀಳಗಿ ಕಡೆಯಿಂದ ಕೊಲ್ಹಾರಕ್ಕೆ ಬರುತ್ತಿರುವ ವೇಳೆ
ಪಟ್ಟಣದ ಹೊರ ಭಾಗದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರೋ ಮೂರು ಕಿಮೀ ವ್ತಾಪ್ತಿಯ ಬೃಹತ್ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ನದಿಯ ತಟದಲ್ಲಿ ಟಿಪ್ಪರ್ ಕೆಳಕ್ಕೆ ಬಿದ್ದು ಟಿಪ್ಪರನಲ್ಲಿದ್ದ ಪರಶುರಾಮ ಹೊಸಮನಿ (30) ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಸಚಿನ್ ರಾಠೋಡನನ್ನು ವಿಜಯಪುರದ ಧನ್ವಂತರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮೃತ ಬಸವನಬಾಗೇಬಾಡಿ ತಾಲೂಕಿನ ಯಾಳವಾರ ಗ್ರಾಮದವನಾಗಿದ್ದಾನೆ. ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಮಹಿಬೂಬ್ ಗುಂತಕಲ್