ರಸ್ತೆಯಲ್ಲಿ ಮೊಲ್ಯಾಸಿಸ್ ಸೋರಿಕೆ : ದ್ವಿಚಕ್ರ ವಾಹನ ಸವಾರರಿಗೆ ಅಪಾಯ

ಬೆಳಗಾವಿ ಭಾರತದ ಬೆನ್ನೆಲುಬು ಆಗಿರುವ ಕೃಷಿ ಕ್ಷೇತ್ರವೂ ಈ ಕೃಷಿ ಕ್ಷೇತ್ರದ ಕೃಷಿಕರೆಲ್ಲರೂ ಒಂದು ಕಾಲದಲ್ಲಿ ಸಾವಯವ ಗೊಬ್ಬರವನ್ನು ಅವಲಂಬಿಸಿದ್ದರು ಆ ಕೃಷಿಕರೆಲ್ಲರೂ ಸಾವಯವ ಗೊಬ್ಬರಗಳನ್ನು ಉತ್ಪಾದಿಸುವ ಕಾರ್ಯವನ್ನು ಮರೆತು ಹೋಗಿದ್ದಾರೆ ಕಾರಣ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮುಖಾಂತರ ಸಿಗುವ ಮಳ್ಳಿ (ಮೊಲ್ಯಾಸಿಸ್) ಹಾಗೂ ಬೂದಿಗೆ ಮಾರುಹೋಗಿದ್ದಾರೆ. ಮಳ್ಳಿ ಹಾಗೂ ಬೂದಿ ಇವುಗಳನ್ನು ಬಳಸುವುದರಿಂದ ಬೆಳೆಗಳ ಉತ್ಪಾದನೆಯನ್ನು ಹೆಚ್ಚು ಪಡೆಯುತ್ತೇವೆ ಎಂದು ತಿಳಿದುಕೊಂಡು ಕಾರ್ಖಾನೆಗಳ ಮುಖಾಂತರ ಅವುಗಳನ್ನು ಪಡೆಯುತ್ತಿದ್ದಾರೆ. ಕಾರ್ಖಾನೆಗಳಿಂದ ಮಳ್ಳಿ ಹಾಗೂ ಬೂದಿ ಸಾಗಾಟವಾಗುತ್ತಿರುವ ಸಮಯದಲ್ಲಿ ವಾಹನಗಳಿಂದ ರಸ್ತೆಗಳ ಮೇಲೆ ಸೋರಿಕೆಯಾಗುತ್ತಿದೆ.

ನಗರಗಳಲ್ಲಿ ಸಕ್ಕರೆ ಕಾರ್ಖಾನೆಯಿಂದ ಸಾಗಾಟವಾಗುತ್ತಿದ್ದ ಮೊಲ್ಯಾಸಿಸ್ ರಸ್ತೆ ಮೇಲೆ ಬಿದ್ದ ಪರಿಣಾಮ ದ್ವಿಚಕ್ರವಾಹನ ಸವಾರರು ಅಪಘಾತಕ್ಕೀಡಾಗುತ್ತಿರುವ ಘಟನೆ ನಡೆದಿದೆ ನಡೆಯುತ್ತಿದೆ ಈ ಅವ್ಯವಸ್ಥೆಯಿಂದಾಗಿ ರಸ್ತೆ ನಿಯಂತ್ರಣ ತಪ್ಪಿದ ವಾಹನಗಳು ಜಾರಿ ಬಿದ್ದು, ಕೆಲವರು ಗಾಯಗೊಂಡಿದ್ದಾರೆ.

ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ರಸ್ತೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ಇನ್ನು ಮುಂದೆ ಈ ತರಹದ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಸಂಬಂಧಪಟ್ಟ ಇಲಾಖೆಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ವಾಹನ ಸವಾರರು ರಸ್ತೆ ಮಾರ್ಗದಲ್ಲಿ ಸಾಗುವಾಗ ಹೆಚ್ಚಿನ ಜಾಗ್ರತೆ ಇಂದ ಸಂಚರಿಸಿ.

ಈ ಅವಘಡವನ್ನು ತಪ್ಪಿಸುವ ಸಲುವಾಗಿ ರಸ್ತೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರಿಯಾದ ಬಿಗಿದ ಮುಚ್ಚಳೆಯೊಂದಿಗೆ ಮೊಲ್ಯಾಸಿಸ್ ಸಾಗಾಟ ಮಾಡುವಂತೆ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು.

ನಾಗರಿಕರು ಯಾವುದೇ ತುರ್ತು ಸಮಸ್ಯೆ ಎದುರಿಸಿದರೆ, ಸಂಬಂಧಿತ ಸ್ಥಳೀಯ ಪ್ರಾಧಿಕಾರಿಗಳನ್ನು ಸಂಪರ್ಕಿಸಲು ಈ ಮೂಲಕ ವಿನಂತಿಸಲಾಗುತ್ತದೆ.

ವರದಿ/ಸದಾನಂದ್ ಎಚ್

error: Content is protected !!