ಶಶಿಕಲಾ ಜೊಲ್ಲೆ ಹಾಗೂ ಅಣ್ಣಸಾಹೇಬ್ ಜೊಲ್ಲೆ ಯವರಿಂದ (ಸ್ಟ್ರೀಟ್ ಲೈಟ್ಗೆ ಗೆ ) ಚಾಲನೆ

ನಿಪ್ಪಾಣಿ ನಗರದಲ್ಲಿ 85 ಲಕ್ಷ ರೂ. ಮೊತ್ತದಲ್ಲಿ ಸುಶೋಭಿಕೃತಗೊಂಡ್ ವಿದ್ಯುತ್ ದೀಪಗಳ
(Street Light) ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ lಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟನೆ ನೆರವೇರಸಿ ಚಾಲನೆ ನೀಡಿದರು.

ರಾತ್ರಿಯಲ್ಲಿ ಗೋಚರತೆಯನ್ನು ಸುಧಾರಿಸಲು ಮತ್ತು ಚಾಲಕರು ಮತ್ತು ಪಾದಚಾರಿಗಳಿಗೆ ಸುರಕ್ಷತೆಯನ್ನು ಹೆಚ್ಚಿಸಲು ನಗರದ ಬೀದಿ ದೀಪಗಳು ಅವಶ್ಯಕ. ಗುಣಮಟ್ಟದ ಬೆಳಕು ನಗರದ ನೋಟವನ್ನು ಸುಧಾರಿಸುತ್ತದೆ ಮತ್ತು ನಿವಾಸಿಗಳ ಸೌಕರ್ಯವನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸೌ.ಸೊನಲ್ ಕೊಠಡಿಯಾ,ಉಪಾಧ್ಯಕ್ಷರಾದ ಶ್ರೀ ಸಂತೋಷ ಸಾಂಗವಕರ,ನಗರಸಭೆ ಸದಸ್ಯರು,ಮಹಿಳಾ ಮೋರ್ಚಾ ಸದಸ್ಯರು, ಸ್ಥಳೀಯ ಮುಖಂಡರು,ಗಣ್ಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದರು

ವರದಿ : ಸದಾನಂದ ಎಚ್

error: Content is protected !!