ಬಳ್ಳಾರಿ: ಫೆ-27 ಕಂಪ್ಲಿ ನಿವಾಸಿಗಳಾದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಹಾಗೂ ಸೌಮ್ಯಶ್ರೀ ಮೋಹನ್‌ಕುಮಾರ್ ಇವರ ಪುತ್ರಿ ದಿಶಾ ಮೋಹನ್(7) ಭರತನಾಟ್ಯ ನೃತ್ಯದಲ್ಲಿ ಇಂಡಿಯನ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿದ್ದಾರೆ.
ಜನವರಿ 26 ಗಣರಾಜ್ಯೋತ್ಸವ ದಿನದಂದು ಜರುಗಿದ ಕಾರ್ಯಕ್ರಮದಲ್ಲಿ ದೇಶದ ನಾನಾ ಕಡೆಗಳಿಂದ 3680 ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು, ಇವರಲ್ಲಿ ದಿಶಾ ಮೋಹನ್ ಒಬ್ಬರಾಗಿದ್ದರು. ದಿಶಾ ಮೋಹನ್ ಬೆಂಗಳೂರಿನ ಎಂಇಸಿ ಪಬ್ಲಿಕ್ ಸ್ಕೂಲ್ ನಲ್ಲಿ ಐಸಿಎಸ್ಇ ವಿಭಾಗದಲ್ಲಿ ಒಂದನೇ ತರಗತಿ ಅಭ್ಯಾಸಿಸುತ್ತಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಜನ ಸಂಖ್ಯೆಯಲ್ಲಿ ಭಾಗವಹಿಸಿ ವಂದೇ ಮಾತರಂ ಗೀತೆಗೆ ರಾಷ್ಟ್ರಧ್ವಜ ಹಿಡಿದು ಭರತನಾಟ್ಯ ನೃತ್ಯ ಮಾಡುವ ಮೂಲಕ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಸ್ಪರ್ಧೆಯಲ್ಲಿ ದೇಶಭಕ್ತಿಯ ಬಗ್ಗೆ ಅಚಲವಾದ ಬದ್ಧತೆಯನ್ನು ಹೊಂದಿ ಉತ್ಸಾಹದಿಂದ ನೃತ್ಯ ಮಾಡಿದ ದಿಶಾ ಮೋಹನ್ ರನ್ನು ಗಮನಿಸಿ 76ನೇ ಗಣರಾಜ್ಯೋತ್ಸವದ ಅಂಗವಾಗಿ “ರಾಷ್ಟ್ರ ಮೊದಲು, ಯಾವಾಗಲೂ ಮೊದಲು” ಎಂಬ ಥೀಮ್‌ನೊಂದಿಗೆ ಹೊಸ ಭಾರತೀಯ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆಂದು ಸುಪ್ರೀಂ ಕೋರ್ಟ್‌ನ ವಕೀಲ ಡಾ.ನಾಗಾರ್ಜುನ ಬಾಬು, ಡಾ.ಪಾವನಿ ಮತ್ತು ಡಾ. ಸ್ವರ್ಣ ಶ್ರೀ ಅವರು ತೀರ್ಪು ನೀಡಿದ್ದಾರೆ.
ದಿಶಾ ಮೋಹನ್ ರ ವಿಶೇಷ ಮನ್ನಣೆ ಮತ್ತು ಪ್ರಶಂಸೆಗಳೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥಾಪಕ ಸಂಪಾದಕ ಡಾ.ಕೆ.ವಿವೇಕಾನಂದಬಾಬುರವರು ಇಂಡಿಯನ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ನೀಡಿದ್ದಾರೆ.
ದಿಶಾ ಮೋಹನ್ ರು 2023 ರಲ್ಲಿ ಫ್ಯಾನ್ಸಿ ಡ್ರೆಸ್ ಡ್ರೈವ್ ನಲ್ಲಿ ದಾಖಲೆ ಮಾಡಿದ್ದರು!
ದಿಶಾಳ ಸಾಧನೆ ಹೆಮ್ಮೆ ತಂದಿದೆ ಎಂದು ತಂದೆ ಮೋಹನ್‌ಕುಮಾರ್ ದಾನಪ್ಪ, ಅಜ್ಜ ಡಾ.ಎ.ಸಿ.ದಾನಪ್ಪ ತಿಳಿಸಿದ್ದಾರೆ.