ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಯವರಿಂದ ಪ್ರತಿಭಟನೆ

ನಿಪ್ಪಾಣಿ : ನಗರದಲ್ಲಿ ಭಾರತೀಯ ಜನತಾ ಪಕ್ಷ ನಿಪ್ಪಾಣಿ ಮಂಡಲ ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಯವರು ಪ್ರತಿಭಟನೆ ನಡೆಸಿದರು.

ಮೀಸಲಾತಿ ಕೊಡಲು ಸಂವಿಧಾನದ ಆಶಯಗಳನ್ನು ಮೂಲೆಗೆ ಸರಿಸಿ ಸಂವಿಧಾನವನ್ನೇ ಬದಲಾಯಿಸಲು ಸಿದ್ದ ಎಂಬಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ, ಸಂವಿಧಾನ ವಿರೋಧಿಗಳ್ಯಾರು? ಸಂವಿಧಾನವನ್ನು ಬದಲಾಯಿಸುವವರು ಯಾರು? ಸಂವಿಧಾನವನ್ನು ಇದುವರೆಗೂ ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ನಿಶ್ಚಿತವಾಗಿಯೂ ‘ಕಾಂಗ್ರೆಸ್’ ಎಂದು ಉತ್ತರ ಹೇಳಲೇಬೇಕಾದೆ. ಸಂವಿಧಾನ ವಿರೋಧಿ ಉಪಮುಖ್ಯಮಂತ್ರಿಯವರಿಗೆ ಧಿಕ್ಕಾರ ಎಂದು ಕಿಧಿಕಾರಿದ್ದರು

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸೋನಾಲ್ ಕೊಠಡಿಯಾ, ಉಪಾಧ್ಯಕ್ಷರಾದ ಸಂತೋಷ ಸಾಂಗವಕರ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಂಡಳಿ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮಹಿಳಾ ಮೋರ್ಚಾ ಸದಸ್ಯರು, ಯುವ ಮೋರ್ಚಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಸದಾನಂದ.ಎಚ್

error: Content is protected !!