ದಿನಾಂಕ:21/10/2025 ರಂದು, ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ನಗರದ ಎಲ್ಲಾ ಇನ್ಸ್‌ಪೆಕ್ಟರ್‌ಗಳು ಮತ್ತು ಮೇಲ್ಪಟ್ಟ ಅಧಿಕಾರಿಗಳಾದ ಸಹಾಯಕ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಆಯುಕ್ತರವರು, ನಗರದ ಸುಮಾರು 60 ಸ್ಥಳಗಳಲ್ಲಿ 6000 ಪೊಲೀಸ್ ವಸತಿಗೃಹ/ಕಾಲೋನಿಗಳಲ್ಲಿ ವಾಸಿಸುತ್ತಿರುವ ಸಿಎಆರ್ ಮತ್ತು ಸಿವಿಲ್ ಪೊಲೀಸ್ ಕುಟುಂಬದವರಿಗೆ ಸಿಹಿ ಹಂಚಿ, ಹಸಿರು ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಅವರ ಕುಂಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿರುತ್ತಾರೆ.
ಇಂತಹ ಸ್ಮರಣೀಯ ಭೇಟಿಗಳು ಇಲಾಖೆಯ ಒಗ್ಗಟು, ನಮ್ಮ ಅಧಿಕಾರಿಗಳು ಮತ್ತು ಅವರ ಕುಟುಂಬಗಳ ಸಮರ್ಪಿತ ಸೇವೆಗೆ ಗೌರವ ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ವರದಿ : ಮುಬಾರಕ್ ಬೆಂಗಳೂರು