ಔರಾದ :- ಪಟ್ಟಣದಲ್ಲಿ ದಿ 24 ಗುರುವಾರ ದಂದು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಹಾಗೂ ದಾಳಿ ಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಔರಾದ ಎಬಿವಿಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರರ ಹೇಡಿತನದ ಗುಂಡಿನ ದಾಳಿಯ ಕೃತ್ಯವನ್ನು ಎಬಿವಿಪಿ ಔರಾದ[ಬಾ] ಶಾಖೆಯು ತೀವ್ರವಾಗಿ ಖಂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಉಗ್ರವಾದಿಗಳನ್ನು ಹಿಡಿದು ಹೇಡೆ ಮುರಿಯಬೇಕು. ಪ್ರತ್ಯೇಕವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದು ಕೊಂಡಿರುತ್ತದೆ. ಆದರೂ ಸಹ ಅಲ್ಲಿನ ಭಯೋತ್ಪಾದಕರ ನುಸುಳುಕೋರರ ಹಾವಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಇತ್ತೀಚಿಗೆ ವಲಸೆ ಕಾರ್ಮಿಕರ ಮೇಲಿನ ದಾಳಿಗಳು ಹಾಗೂ ದಿನಾಂಕ 22-04-2025 ರಂದು ನಡೆದಿರುವ 27 ಜನ ಪ್ರವಾಸಿಗರ ಮೇಲಿನ ದಾಳಿ ಗಮನಿಸುವುದಾದರೆ ಕಾಶ್ಮೀರದ ಶಾಂತಿ ಮತ್ತು ಭಾರತದೊಂದಿಗೆ ಏಕತೆಗೆ ಉಗ್ರರು ಅರ್ಥಾತ್ ಪ್ರತ್ಯೇವಾದಿಗಳು ತೀವ್ರ ಸವಾಲುವೊಡ್ಡು ತಿರುವುದು ಸಂಗತಿಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ವ್ಯಾಪಕ ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರವನ್ನು ನೀಡಬೇಕೆಂದು ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಹಿರಿಯ ಕಾರ್ಯಕರ್ತ ಅಂಬಾದಾಸ ನಳಗೆ ಮಾತನಾಡಿ ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಜಕುಮಾರ ನಾಯ್ಕ ಮಾತನಾಡಿ ರಾಷ್ಟ್ರದಲ್ಲಿ ಭಯೋತ್ಪಾದಕರ ಹಾವಳಿ ತಡೆಗಟ್ಟಬೇಕು ಪಾಕಿಸ್ತಾನಿ ಉಗ್ರಗಾಮಿ ಗಳಿಗೆ ಹಿಡಿದು ಹೇಡೆಮುರಿಯಬೇಕು ಪಾಕಿಸ್ತಾನ ಸಂಪರ್ಕ ಮುಟುಕು ಗೊಳಿಸಬೇಕು ಗಡಿಯಲ್ಲಿ ಭದ್ರತಾ ಸೈನ್ಯದ ಕಾರ್ಯ ಚುರುಕು ಗೊಳಿಸಬೇಕು ನಿನ್ನೆ ನಡೆದ ಪ್ರವಾಸಿ ಸ್ಥಳದಲ್ಲಿ ಪ್ರಾಣ ಆಹುತಿಯಾದ ಹಿಂದೂ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದು ನುಡಿದು ಗ್ರೆಡ್ 2 ತಹಶಿಲ್ದಾರ ವೆಂಕಟೇಶ ಅವರ ಮುಖಾಂತರ ದೇಶದ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿ ಗಳು ಎಬಿವಿಪಿ ಪ್ರಮುಖ ರಾದ ಅಶೋಕ ಶೇಂಬೆಳ್ಳಿ, ಅನೀಲ ಮೇತ್ರೆ, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ಶಶಿಕಾಂತ ಚಾರೆ,ಸಂಗಮೇಶ ದ್ಯಾಡೆ, ಓಂ,ಅಭಿಷಕ ,ಮನೋಜ್ ಇಮ್ರಾನ್ ರಾಹುಲ್ ಓಂಕಾರ್ ಕಿರಣ ಜ್ಞಾನೇಶ್ವರ್ ಎಲ್ಲಪ್ಪ ಅವಿನಾಶ್ ರಾಹುಲ್ ಸಾಯಿನಾಥ್ ವಿಜಯ್ ಹಾಗೂ ಅನೇಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ