ಸಾಧನೆಗೆ ನೂರಾರು ದಾರಿಗಳಿವೆ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ : ಡಾ.ಎ.ಆರ್.ನರೋಡೆ

ಕಾಗವಾಡ : ಪಟ್ಟಣದ ಶಿವಾನಂದ ಪದವಿ-ಪೂರ್ವ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವಾರ್ಷಿಕ ದಿನಾಚಾರಣೆ ಬಹುಮಾನ ವಿತರಣೆ ಸಮಾರಂಭದಲ್ಲಿ ಪ್ರತಿಭೆಯನ್ನುವುದು ಕೇವಲ ಒಂದು ಕ್ಷೇತ್ರವನ್ನು ಅನುಭವಿಸಿಲ್ಲ, ಆ ಪ್ರತಿಭೆಯ ಸಾಧಿಸುವ ಗುರಿ, ಸಾಮರ್ಥ್ಯವನ್ನು ಮತ್ತು ಬದುಕನ್ನು ಕಟ್ಟಿಕೊಳ್ಳುವ ನಿರಂತರ ಪ್ರಯತ್ನ ನಮ್ಮದಾಗಬೇಕಾಗಿದೆ ಎಂದು ಮಹಾಲಿಂಗಪೂರದ ಕೆ.ಎಲ್.ಇ. ಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಎ.ಆರ್.ನರೋಡೆ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪದವಿ ಮಾಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಪಿ. ತಳವಾರ ಇವರು ನಮ್ಮ ಜೀವನದ ದಾರಿ ಸುಗಮವಾಗಬೇಕಾದರೆ, ವಿಧ್ಯಾರ್ಥಿಗಳು ಅತ್ಮೀಯತೆ, ಸಂಸ್ಕಾರ ಮತ್ತು ಮಾನವಿಯ ಮೌಲ್ಯಗಳನ್ನು ಬೆಳಸಿಕೊಂಡು ಸಾಧನೆಯ ಪ್ರಗತಿಯತ್ತ ಮುನ್ನಡಿಯಬೇಕೆಂದು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ತಮ್ಮ ಜೀವನವನ್ನ ಕಟ್ಟಿಕೊಳ್ಳಬೇಕಾದರೆ ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಕೌಶಲ್ಯಗಳನ್ನು ಅಳವಡಿಸಿಕೊಂಡಾಗ ನಾವು ಕಂಡು ಕನಸು ನನಸಾಗುತ್ತದೆ. ನಿರಂತರ ಪ್ರಯತ್ನ ಪಟ್ಟರೆ ಪ್ರತಿಫಲ ನಮಗೆ ದೊರೆಯುತ್ತದೆ ಎಂದು ಎಸ್.ಎಂ.ಎ. ಟ್ರಸ್ಟ್’ನ ಏಕನ್ಯಾಸಧಾರಿಗಳಾದ ಶ್ರೀ.ಪ.ಪೂ.ಯತೀಶ್ವರಾನಂದ ಸ್ವಾಮಿಜಿ ಮತ್ತು ಪ.ಪೂ.ಡಾ.ಶ್ರದ್ಧಾನಂದ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಆರ್ಶೀವಚನ ನೀಡಿದರು.

ಪ್ರಾರಂಭದಲ್ಲಿ ಪ್ರಥಮ ಪಿಯುಸಿ ವರ್ಗದ ವಿದ್ಯಾರ್ಥಿಗಳೂ ಸ್ವಾಗತ ಗೀತೆ ಮತ್ತು ನಾಡಗೀತೆಯನ್ನು ಹಾಡಿದರು ಎಮ್.ಎಸ್.ಮಾಂಜರಿ ಅತಿಥಿ ಪರಿಚಯ ಮತ್ತು ಗಣ್ಯಮಾನ್ಯರನ್ನು ಸ್ವಾಗತಿಸಿದರು. ಪ.ಪೂ.ಪ್ರಚಾರ್ಯರಾದ ಪಿ.ಬಿ.ನಂದಾಳೆ ವಾರ್ಷಿಕ ವರದಿ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ೨೦೨೫ನೇ ಸಾಲಿನ ಡಿ.ಎಸ್. ಕರ್ಕಿ ಕಾವ್ಯ ಪುರಸ್ಕಾರವನ್ನು ಪಡೆದು ಕೊಂಡು ಡಾ.ಎಂ.ಬಿ.ಹೂಗಾರ, ನಿವೃತ್ತ ಗುಮಾಸ್ತರಾದ ಜೆ.ಎಸ್.ಘೋಡಕೆ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ ಶಿವಾನಂದ ಮುಂಜೆ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ೧೨ ವಿದ್ಯಾರ್ಥಿಗಳಿಗೆ ಸತ್ಕಾರಿಸಲಾಯಿತು. ಆಡÀಳಿತ ಮಂಡಳಿ ಹಾಗೂ ಇತರೆ ನಗದು ಬಹುಮಾನ ವಿತರಣೆಯನ್ನು ಟಿ.ವ್ಹಿ.ದಭಾಡೆ ಮತ್ತು ಎಮ್.ಎಲ್. ಕೋರೆ ನಡೆಸಿದರೆ, ಪ್ರತಿಭಾ ಪುರಸ್ಕಾರವನ್ನು ಶ್ರೀಮತಿ ಎಸ್.ಎಸ್.ಗಣೆ ನಡೆಸಿಕೊಟ್ಟರು. ಆರ್.ಪಿ.ಮಗದುಮ ಮತ್ತು ಎಮ್.ಎಸ್.ಮಾಂಜರಿ. ಕಾರ್ಯಕ್ರಮವನ್ನು ನಿರೂಪಿಸಿದರು. ವಾರ್ಷಿಕ ದಿನಾಚರಣೆ ಕಾರ್ಯಾಧ್ಯಕ್ಷರಾದ ಜಿ.ಎಮ್ ಶಿಂಧೆ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಕಾರ್ಯಾದರ್ಶಿಗಳಾದ ಬಿ.ಎ.ಪಾಟೀಲ, ಆಡಳಿತಾಧಿಕಾರಿಗಳಾದ ವ್ಹಿ.ಎಸ್. ತುಗಶೆಟ್ಟಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಎ.ಎಸ್.ಕೋರವಿ, ಕ್ರೀಡಾ ಕಾರ್ಯಾದ್ಯಕ್ಷರಾದ ಎ.ಎ. ಪಿಂಪಳೆ, ಆದರ್ಶ ವಿದ್ಯಾರ್ಥಿ ಕು. ಸುಹಾಸ ಮಾಳಗೆ, ಆದರ್ಶ ವಿದ್ಯಾರ್ಥಿನಿ ಕು.ಸ್ವಾತಿ ಪಿಸೆ, ಕ್ರೀಡಾಕಾರ್ಯದರ್ಶಿ ಕುಮಾರಿ ಭಾಗ್ಯಶ್ರೀ ಮಠಪತಿ, ನಿವೃತ್ತ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಪಾಲಕರು, ಮಹಾವಿದ್ಯಾಲಯದ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಭರತೇಶ ನಿಡೋಣಿ ಜೆಕೆ ನ್ಯೂಸ್ ಕನ್ನಡ

error: Content is protected !!