ಪ್ರಪಂಚದಲ್ಲಿ ತ್ಯಾಗ, ಸಹನೆ ಮತ್ತು ಪ್ರೀತಿಗೆ ಇನ್ನೊಂದು ಹೆಸರೇ ತಾಯಿ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಅಭಿಪ್ರಾಯ

ಔರಾದ್ : ಪ್ರಪಂಚದಲ್ಲಿ ತ್ಯಾಗ, ಸಹನೆ ಮತ್ತು ಪ್ರೀತಿಗೆ ಇನ್ನೊಂದು ಹೆಸರೇ ತಾಯಿ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ವಡಗಾಂವ ಗ್ರಾಮದಲ್ಲಿ ಆರಾಧ್ಯ ಟ್ಯುಟೋರಿಯಲ್ ವತಿಯಿಂದ ಆಯೋಜಿಸಿದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿ, ತಾಯಿಗಿಂತ ಮಿಗಿಲಾದ ದೇವರಿಲ್ಲ. ಭೂಮಿ ಮೇಲಿನ ನಿಜವಾದ ದೇವರು ಎಂದರೆ ಅದು ತಾಯಿಯೇ.

ತಾಯಿಯ ತ್ಯಾಗ, ಆಕೆಯ ಪರಿಶುದ್ಧ ಹಾಗೂ ನಿಶ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ತಾನು ನೋವುಂಡು, ಮಕ್ಕಳಿಗೆ ಖುಷಿಯನ್ನೇ ನೀಡುವ ತಾಯಿಗೆ ಸದಾ ಗೌರವ ನೀಡಬೇಕು ಎಂದರು.

ಸಂಪನ್ಮೂಲ ಶಿಕ್ಷಕಿ ಗೀತಾ ಮಾತನಾಡಿ, ಬದುಕಿನಲ್ಲಿ ಎಲ್ಲ ನೋವುಗಳುಂಡು ಬದುಕುವ ತಾಯಿ ನಮ್ಮ ಕಣ್ಣಿಗೆ ಕಾಣುವ ದೇವರಾಗಿದ್ದಾಳೆ. ಅವಳ ತ್ಯಾಗ, ಸಹನೆ ಮತ್ತು ಪ್ರೀತಿಗೆ ಸ್ಮರಿಸುವ ದಿನ‌ ಇದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ನಿರ್ಲಕ್ಷಿಸಿ ವೃದ್ಧಾಶ್ರಮಗಳಿಗೆ ಕಳುಹಿಸಿಕೊಡುವುದು ಬಿಟ್ಟು ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು. ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ನವೀಲಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಖಾಜಾ ಖಲೀಲುಲ್ಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಸಿದ್ದಾರೆಡ್ಡಿ, ಆರಾಧ್ಯ ಟ್ಯುಟೋರಿಯಲ್ ಸಂಸ್ಥಾಪಕ ಹಾವಗಿರಾವ ನೆಳಗೆ, ಶಿಕ್ಷಕಿ ಕಸ್ತೂರಿ, ಪತ್ರಕರ್ತ ಮನ್ಮತಪ್ಪ ಸ್ವಾಮಿ, ವಡಗಾಂವ ಕಸಾಪ ವಲಯ ಅಧ್ಯಕ್ಷ ಚಂದ್ರಕಾಂತ ಫುಲೆ, ಯುವ ಘಟಕದ ಅಧ್ಯಕ್ಷ ಅಂಬಾದಾಸ ನಳಗೆ, ಮಾಧ್ಯಮ ಪ್ರತಿನಿಧಿ ಅಮರಸ್ವಾಮಿ ಸ್ಥಾವರಮಠ, ಓಂಕಾರ ಮೇತ್ರೆ, ಅಂಬಿಕಾ ಸೇರಿದಂತೆ ಇನ್ನಿತರರಿದ್ದರು

ಇದೆ ಸಂದರ್ಭದಲ್ಲಿ ವಡಗಾಂವ ಸುತ್ತಮುತ್ತಲಿನ ಕೆಲ ತಾಯಿಯಂದಿರು, ಕಸಾಪ ಪದಾಧಿಕಾರಿಗಳು ಹಾಗೂ ಆರಾಧ್ಯ ಟ್ಯುಟೋರಿಯಲ್ ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

error: Content is protected !!