ಬೆಂಗಳೂರು :ಯಾದಗಿರಿ ಉಸ್ತುವಾರಿ ಮಂತ್ರಿ ಕ್ಯಾಬಿನೆಟ್ ಸಚಿವ ಸಚಿವ ದರ್ಶನಾಪೂರ ರವರು ಸರ್ಕಾರಿ ಭೂಕಬಳಿಕೆ, ದಲಿತರಿಗಾಗಿ ಮೀಸಲಿಟ್ಟ ಜಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದ, ಸರ್ಕಾರಕ್ಕೆ ಸುಳ್ಳು ಹೇಳಿ ನಿವೇಶನ ಪಡೆದ ಮತ್ತು ಕೃಷಿ ಇಲಾಖೆಯ ಕೃಷಿ ಹೊಂಡದ ಹೆಸರಿನಿದ ಮೋಸ ಮಾಡಿದ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಹಾಗೂ (ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ) ಶರಣಬಸಪ್ಪಾ ದರ್ಶನಾಪೂರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪತ್ರಿಕಾಗೋಷ್ಠಿ*
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಹೆಸರಾಗಿರುವ ರಾಜಕೀಯ ದುರುಳರ ಸಾಲಿನಲ್ಲಿ ಈಗಿನ ಶಾಹಪೂರ ಎಂಎಲ್‌ಎಲ್ (ಜಿಲ್ಲಾ ಉಸ್ತುವಾರಿ ಮಂತ್ರಿಗಳು ಯಾದಗಿರಿ) ಮೊದಲ ಸಾಲನಲ್ಲಿ ನಿಲ್ಲುತ್ತಾರೆ.
ರಾಜಕೀಯ ಅಧಿಕಾರವನ್ನು ತಮ್ಮ ಸ್ವಯಂ ಅಭಿವೃದ್ದಿಗಾಗಿ ಬಳಸಿಕೊಂಡಿರುವ ಮಂತ್ರಿ ಶರಣಬಸಪ್ಪ ದರ್ಶನಾಪೂರ ರವರ ಬೇಜಬ್ಬಾವರಿ ನಡೆಯಿಂದಾಗಿ ಇವತ್ತು ಯಾದಗಿರಿ ಜಿಲ್ಲೆಯ ಅತ್ಯಂತ ಹಿಂದುಳಿದ ಜಿಲ್ಲೆ ಹಣೆಪಟ್ಟಿಗೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಕೆಳಸ್ಥಿರದಲ್ಲಿ ಇದ್ದು, ಅಲ್ಲಿನ ರಾಜಕೀಯ ನಾಯಕರುಗಳಿಗೆ ಜಿಲ್ಲೆಯ ಅಭಿವೃದ್ಧಿಕ್ಕಿಂತ ತಮ್ಮ ಮತ್ತು ಬಂಧು-ಬಳದವರ ಉನ್ನತಿಯೇ ಪ್ರಮುಖವಾಗಿರುವುದಂದ
ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ, ಅಲ್ಲಿ ಜಾತಿ ಪದ್ಧತಿ ಜೀವಂತವಿದ್ದು, ದಲಿತರಿಗೆ ಈಗಲೂ ಕೂಡ ಅನೇಕ ಪ್ರತಿಬಂಧಗಳಿವೆ, ಅಲ್ಲಿ ಹೇಳಿಕೊಳ್ಳುವಂತಹ ಶಿಕ್ಷಣ ಸಂಸ್ಥೆಗಳಲ್ಲ, ಶಾಲಾ ಕಾಲೇಜುಗಳಿಲ್ಲ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರಿಲ್ಲ, ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶೌಚಾಲಯದ ವ್ಯವಸ್ಥೆಯಿಲ್ಲ, ಯಾದಗಿರಿ ಜಿಲ್ಲೆಯ ರೈತರ, ಧಮನಿತರ ರಕ್ಷಣೆಗಾಗಿ ಸರ್ಕಾರ ಮುಂದೆ ಬಾರದ ಕಾರಣ ಮತ್ತು ಸರ್ಕಾರದ ಅಧಿಕಾರಿಗಳ ಬೇಜವಾಬ್ದಾರಿ, ಮತ್ತೇ ಭ್ರಷ್ಟಾಚಾರದಿಂದಾಗಿ ರಾಜಕೀಯದವರು ಆಡಿದ್ದೇ ಆಟ ಎನ್ನುವಂತಾಗಿದೆ. ತಮ್ಮ ರಾಜಕೀಯ ಅಧಿಕಾರದ ಮಧದ ಮುಂದೆ ಕಾನೂನು, ನ್ಯಾಯಾಲಯಗಳ ಆದೇಶ/ನಿಯಮಗಳು ಗೌಣವಾಗಿ ಬಿಟ್ಟಿವೆ ಎನ್ನುವುದಕ್ಕೆ ಶಹಾಪೂರದ ಶಾಸಕ ಮತ್ತು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ) ಶರಣಬಸಪ್ಪಾ ದರ್ಶನಾಪೂರ ಒಂದು ಜೀವಂತ ಉದಾಹರಣೆಯಾಗಿದ್ದಾರೆ. ಶಹಾಪೂರ ಪಟ್ಟಣದ ಗುತ್ತಪ್ಪ ತಂದೆ ಸಂಗಪ್ಪ ಚಿಂಚೋಳಿ ಎನ್ನುವವರು 1974 ರ ಸಮಯದಲ್ಲಿ ತಮ್ಮ ಮಾಲೀಕತ್ವದ ಸರ್ವೆ ನಂ. 6 ರಲ್ಲಿನ 7 ಎಕರೆ ಜಮೀನಿನಲ್ಲಿ ಕೆಎಸ್‌ಆರ್‌ಟಿಸಿ ಬಸಸ್ಟ್ಯಾಂಡ, ಬಿಡಿಓ, ಪಿಡಬ್ಲ್ಯುಡಿ ಕಛೇರಿ ಮತ್ತು ಕೊಂಚಿ ಕೊರವ ಜನರ ನಿವೇಶನಕ್ಕಾಗಿ ದಾನ ಮಾಡಿದ್ದಾರೆ. ಆ ಸ್ಥಳದಲ್ಲಿ ಸಧ್ಯಕ್ಕೆ ಕೆಎಸ್‌ಆರ್‌ಟಿಸಿ ಬಸಸ್ಟ್ಯಾಂಡ ತಾಲೂಕಾ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಪಿಡಬ್ಲ್ಯುಡಿಗೆ ಮತ್ತು 2 ಎಕರೆ ಜಮೀನಿನಲ್ಲಿ ಕೊಂಚಿಕೊರವ ಜನಾಂಗದ ನಿವೇಶನಕ್ಕಾಗಿ ಕೊಡಲಾಗಿದೆ. ಅತ್ಯಂತ ಬೆಲೆ ಬಾಳುವ ಜಮೀನು ಮುನ್ಸಿಪಾಲ್ಟಿ ಶಹಾಪೂರ ಹೆಸರಿನಿಂದ ವರ್ಗಾವಣೆ ಮಾಡಿದ್ದರೂ ಸಂಪೂರ್ಣ 7 ಎಕರೆ ಜಮೀನು ನಗರಸಭೆ ಶಹಾಪೂರ ಹೆಸರಿನಲ್ಲಿದೇ ಆ ಜಮೀನಿನಲ್ಲಿ ಶರಣಬಸಪ್ಪ ದರ್ಶನಾಪೂರ ರವರ ಚಿಕ್ಕಪ್ಪ ಬಸವರಾಜಪ್ಪ ಗೌಡರ ಅಧ್ಯಕ್ಷತೆಯ ಚರಬಸವೇಶ್ವರ ಶಿಕ್ಷಣ ಸಂಸ್ಥೆಯು ಕಬಳಿಸಿದ ಮತ್ತು ಶರಣಬಸಪ್ಪ ದರ್ಶನಾಪೂರ ಸಹೋದರ ಅಂಬರೀಶ ಗೌಡ ರವರ ಹೆಂಡತಿ ವಿಜಯಲಕ್ಷ್ಮೀ, ಶರಣಬಸಪ್ಪ ದರ್ಶನಾಪೂರ ರವರ ಚಿಕ್ಕಪ್ಪನ ಮಗ ಚಂದ್ರಶೇಖರ ರವರುಗಳ ಸಹಭಾಗಿತ್ವದಲ್ಲಿ ಹೆಸರಿನಿಂದ 2001-02 ರಲ್ಲಿ ಕೊಂಚಿಕೊರವ ಜನಾಂಗಕ್ಕಾಗಿ ಜಮೀನನ್ನು ಕಬಳಿಸಿ ಅಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸಿದ್ದಾರೆ. ಆ ಕುರಿತು ಶರಣಬಸಪ್ಪ ದರ್ಶನಾಪೂರ ರವರಾಗಲೀ ಅವರ ಕುಟುಂಬದ ಸದಸ್ಯರಾಗಲೀ ಮುನ್ಸಿಪಲ್ ವತಿಯಿಂದ ನೋಂದಣಿ ಪ್ರಮಾಣ ಪತ್ರ ಪಡೆದಿಲ್ಲ. ಕಾನೂನು ಬಾಹಿರವಾಗಿ ಭೂಮಿಯನ್ನು ಕಬಳಿಸಿದ ಇವರ ವಿರುದ್ಧ ದಿನಾಂಕ:04-03-2010 ರಂದು ಶಹಾಪೂರಿನ ಪ್ರಾಂತ ರೈತ ಸಂಘದ ಅಧ್ಯಕ್ಷರ ದೂರಿನ
ಮೇರೆಗೆ ಅಂದಿನ “ಸರ್ಕಾರಿ ಜಮೀನು ಸಂರಕ್ಷಣೆ ಕಾರ್ಯಪಡೆಯ ವ್ಯವಸ್ಥಾಪಕರು, ನಿರ್ದೇಶಕರು” ಚರಬಸವೇಶ್ವರ ವಿದ್ಯಾ ಸಂಸ್ಥೆ ಎಂದು ಹೇಳಿ ಶ್ರೀ ಶರಣಬಸಪ್ಪ ದರ್ಶನಾಪೂರ ರವರು 2 ಎಕರೆಗೂ ಹೆಚ್ಚಿನ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದು, ಆ ಬಗ್ಗೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಿ ದಿನಾಂಕ:24-03-2010 ರೊಳಗಾಗಿ ವರದಿ ಸಲ್ಲಿಸುವಂತೆ ತಹಸೀಲ್ದಾರ ಶಹಾಪೂರ ರವರಿಗೆ ಪತ್ರ ಬರೆದಿದ್ದರು.
ಮಾನ್ಯ ಮಾಜಿ ಕಾರ್ಮಿಕ ಸಚಿವ ಶ್ರೀ ಎಸ್.ಕೆ.ಕಾಂತಾ ರವರು ಚರಬಸವೇಶ್ವರ ವಿದ್ಯಾಸಂಸ್ಥೆಯವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕೇಳಿದ್ದರಿಂದ ದಿನಾಂಕ:11-01-2010 ರಂದು ಶಹಾಪೂರನ ಪುರಸಭೆಯ ಮುಖ್ಯಾಧಿಕಾರಿ ಮಾಹಿತಿ ನೀಡಿ ಸದರಿ ಆಸ್ತಿಯು ಪುರಸಭೆಗೆ ಸೇರಿದ್ದು ಲೀಜ್ ಅಥವಾ ಮಾರಾಟ ಮಾಡಿರುವುದಿಲ್ಲವೆಂದು ಹೇಳಲಾಗಿದೆ.
ಬಡವರಿಗಾಗಿ ಮೀಸಲಿಟ್ಟ 2 ಎಕರೆ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದಲ್ಲದೆ, ಸದರಿ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ತಾವೆ ಮಾಲೀಕರಂತೆ ಬೇರೆಯವರಿಗೆ ಮಾರಾಟ ರಾಟ ಮಾಡಿದ್ದಾರೆ.ಸದರಿ ಕಬಳಿಸಿದ ಭೂಮಿಯನ್ನು ತೆರವುಗೊಳಿಸುವಂತೆ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ರವರು ಹೊರಡಿಸಿದ ಆದೇಶದ ವಿರುದ್ಧ ಶರಣಬಸಪ್ಪ ದರ್ಶನಾಪೂರ ರವರ ಬಂಧುಗಳು ಶಹಾಪೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ತಡೆಯಾಜ್ಞೆ ತಂದಿದ್ದರು (ಓ.ಎಸ್.ನಂ.137/2010) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 18-09-2010 ರಂದು ಕಂದಾಯ ಇಲಾಖೆಯ ಪದನಿಮಿತ್ತ ವ್ಯವಸ್ಥಾಪಕರು ಆಗಿನ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಮರ್ಥರಾಗಿರುವ ವಿಶೇಷ ಸರ್ಕಾರಿ ವಕೀಲರನ್ನು ನೇಮಕ ರಂದು ಕರ್ನಾಟಕ ಸಾರ್ವಜನಿಕ ಮಾಡುವಂತೆ ಪತ್ರ ಬರೆದಿದ್ದರು. ದಿ14-02-2011 ಜಮೀನುಗಳ ನಿಗಮ (ನಿ) ದ ವ್ಯವಸ್ಥಾಪಕರು, ನಿರ್ದೇಶಕರು ನಗರಾಭಿವೃದ್ಧಿ, ಇಲಾಖೆಯ ಸರ್ಕಾರದ ಕಾರ್ಯದರ್ಶಿ ರವರಿಗೆ ಪತ್ರ ಬರೆದು ಚರಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ ಕಬಳಿಸಿ ಭೂಮಿಯನ್ನು ವಾಪಸ್ಸು ಪಡೆಯುವಲ್ಲಿ ವಿಫಲರಾದ ಶಹಾಪೂರಿನ ಮುನ್ಸಿಪಾಲಟಿ ರವರ ವಿರುದ್ಧ ಕ್ರಮಕ್ಕಾಗಿ ಪತ್ರ ಬರೆದಿದ್ದರೂ ಕೂಡಾ ಶರಣಬಸಪ್ಪ ದರ್ಶನಾಪೂರರವರ ಸ್ಥಳಿಯವಾಗಿ ಬಲಿಷ್ಠರು ಮತ್ತು ರಾಜಕೀಯವಾಗಿ ಬಲಿಷ್ಠರಾಗಿದ್ದರಿಂದ, ತಮಗೆ ಅನುಕೂಲಕ್ಕೆ ತಕ್ಕಂತೆ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ.
ಆ ಆಸ್ತಿಯ ಕುರಿತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಂದ ಸ್ಥಳಿಯ ಅಧಿಕಾರಿಗಳಿಗೆ ಸಾಕಷ್ಟು ಪತ್ರ ವ್ಯವಹಾರ ಮಾಡಿದರೂ ಕೂಡಾ ಸರ್ಕಾರಕ್ಕೆ ಸಮರ್ಪಕ ಉತ್ತರ ಕೊಟ್ಟಿರುವುದಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಬಸಪ್ಪ ದರ್ಶನಾಪೂರ ಬಂಧುಗಳು ಮಾನ್ಯ ನ್ಯಾಯಾಲಯದಲ್ಲಿ ತಡೆಯಾಜ್ಞೆಗಾಗಿ ಹೂಡಿದ ದಾವೆ ವಜಾಗೊಂಡಿತ್ತು. ನಂತರ ಚರಬಸವೇಶ್ವರ ವಿದ್ಯಾಸಂಸ್ಥೆಯವರು
ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಮಾಡಿದ್ದರಿಂದ (ಎಂ.ಎ.ನಂ.13/2021) ಮಾನ್ಯ ನ್ಯಾಯಾಲಯ ದಿನಾಂಕ: 12-12-2011 ರಂದು ಸರ್ಕಾರಿ ಜಮೀನು ಕಚ್ಚೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕಬ್ಬಾದಿಂದ ವಿಮುಕ್ತಿಗೊಳಿಸುವಂತೆ ಆದೇಶ ಮಾಡಿತ್ತು ಮತ್ತು ದಿನಾಂಕ:30-04-2014 ರಂದು ತಾವು ಹೂಡಿದ ದಾವೆ ನಂ.137/2010 ರಲ್ಲಿ ಸಾಕ್ಷಿ ಮಾಡಿಸುವಲ್ಲಿ ದರ್ಶನಾಪೂರ ಬಂಧುಗಳು ವಿಫಲರಾಗಿರುವುದರಿಂದ ಮಾನ್ಯ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು. ಶಹಾಪೂರ
2001-02 ರಿಂದ ನಡೆದ ಸಾರ್ವಜನಿಕ ಹೋರಾಟ ಇನ್ನೂ ಅಂತ್ಯವಾಗಿಲ್ಲ. ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ (ನಿ) ದ ವ್ಯವಸ್ಥಾಪಕ ನಿರ್ದೇಶಕರು ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ನೆನಪೋಲೆಗಳನ್ನು ಕಳುಹಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಪಹಣಿ ಪತ್ರಿಕೆಗಳಲ್ಲಿ 1974 ರಿಂದ ಇಲ್ಲಿಯವರೆಗೆ ಆ ಆಸ್ತಿ ಶಹಾಪೂರದ ನಗರಸಭೆ ಹೆಸರಿನಲ್ಲಿಯೇ ಇದೆ. ಶರಣಬಸಪ್ಪಾ ದರ್ಶನಾಪೂರ ಮತ್ತು ಧೂಳಿಪಟವಾಗುತ್ತಿವೆ. ಕುಟುಂಬದ ಅವರ ಮುಂದೆ ಕಾನೂನಿನ ಎಲ್ಲಾ ನಿಯಮಗಳು
ಸಣ್ಣ ಮತ್ತು ಮಧ್ಯಮ ವರ್ಗಗಳ ಸಮಗ್ರ ಅಭಿವೃದ್ಧಿ ಯೋಜನೆ (ಐಡಿಎಸ್‌ಎಂ) ಯ ಸರ್ವೆ ನಂ.826 ರಲ್ಲಿ 1 ಎಕರೆ 32 ಗುಂಟೆ ಜಮೀನನ್ನು ಕೂಡ ಪಡೆದಿದ್ದು, ಅಲ್ಲಿನ ಎಲ್ಲ ಗಾರ್ಡನ ಸ್ಥಳಗಳನ್ನು ಕಬ್ಬಾ ಮಾಡಿದ್ದಾರೆ. ದಿವಂಗತ ಎನ್. ಧರ್ಮಸಿಂಗ ರವರ ಸರ್ಕಾರದಲ್ಲಿ (2004-05) ದಿನಾಂಕ:21-11-2004 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹೆಚ್‌ಬಿಆರ್, 3ನೇ ಬ್ಲಾಕನಲ್ಲಿ 3ಬಿಎಂ, 44 ಸಂಸ್ಥೆಯ 50X80 ವಿಸ್ತಿರ್ಣದ ನಿವೇಶನವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ, ಇದಕ್ಕಿಂತಲೂ ಮೊದಲು ಇದೇ ಶರಣಬಸಪ್ಪ ದರ್ಶನಾಪೂರ ರವರು ತಮ್ಮ ಪತ್ನಿ ಶ್ರೀಮತಿ ಭಾರತಿ ಎಸ್.ಪಾಟೀಲರವರ ಹೆಸರಿನಿಂದ ದಿನಾಂಕ:30-10-2003 ರಲ್ಲು ಬೆಂಗಳೂರಿನ ಕೆಆರ್ ಪುರಂ ಹೋಬಳಿಯ ರಾಜನಹಳ್ಳಿಯಲ್ಲಿ 45X60 ಅಡಿ ನಿವೇಶನವನ್ನು ಖರೀದಿ ಮಾಡಿದ್ದರು, ಈ ಮಹತ್ವದ ವಿಷಯವನ್ನು ಮುಚ್ಚಿಟ್ಟ ಶರಣಬಸಪ್ಪ ದರ್ಶನಪೂರ ರವರು ಬಿಡಿಎ ಬೆಂಗಳೂರು ಪ್ರಾಧಿಕಾರಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಬಿಡಿಎ ಸೈಟ್ ಪಡೆದಿದ್ದಾರೆ.
ಶರಣಬಸಪ್ಪ ದರ್ಶನಾಪೂರ ಶಹಾಪೂರ ಪಟ್ಟಣದ ಶೋಷಿತರ 2 ಎಕರೆ ಜಮೀನು ಕಬಳಿಸಿ, ಐಡಿಎಸ್‌ಎಂಟಿ ಯೋಜನೆಯ ನಿವೇಶನದ ಉದ್ಯಾನವನದ ಜಾಗಗಳನ್ನು ಕಚ್ಚೆ ಮಾಡಿ, ಬೆಂಗಳೂರಿನಲ್ಲಿ ತಮ್ಮ ಶ್ರೀಮತಿ ಹೆಸರಿನಿಂದ ನಿವೇಶನ ಹೊಂದಿದರೂ ಕೂಡಾ ಅದನ್ನು ಮುಚ್ಚಿಟ್ಟು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಅನ್ನು ಪಡೆದಿರುವುದು ಕ್ರಿಮಿನಲ್ ಅಪರಾಧವಾಗಿದ್ದು, ತಮ್ಮ ರಾಜಕೀಯ ಪ್ರಾಬಲ್ಯ ಬಳಸಿ ಬಚಾವಾಗುತ್ತಾ ಬರುತ್ತಿದ್ದಾರೆ.
ಇಂಥಹ ಖ್ಯಾತಿಯ ರಾಜ್ಯದ ಮಂತ್ರಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶರಣಬಸಪ್ಪ ದರ್ಶನಾಪೂರರವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಮೀಸಲಿರುವ ಯೋಜನೆಯ ಲಾಭ ಕೂಡಾ ಪಡೆದಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಿಯ ಯೋಜನೆ. ಜಲಾನಯನ ಅಭಿವೃದ್ಧಿ ಘಟನ 2.0 ಯೋಜನೆಯ (PMKSY-WDC2.0 ಯೋಜನೆಯ) 2023-24ನೇ ಸಾಲಿನ SCSP/TSP ಯೋಜನೆಯ ಫಲಾನುಭವಿಗಳ ಪಟ್ಟಿಯ ಕ್ರ.ಸಂ.414 ರ 2023-24 ರ ವರ್ಷದಲ್ಲಿ ಶಹಾಪೂರ ತಾಲೂಕಿನ ದರ್ಶನಾಪೂರ ಗ್ರಾಮದಲ್ಲಿ ಕೃಷಿ ಹೊಂಡಾದ ಹೆಸರಿನಿಂದ 4,16,141 ರೂಪಾಯಿ ವಂಚನೆಯಿಂದಾಗಿ ಪಡೆದಿದ್ದಾರೆ. SCSP/TSP ಯೋಜನೆಯ ಹಣವನ್ನು ಸಾಮಾನ್ಯ ಅಭ್ಯರ್ಥಿಯಾಗಿ ಮತ್ತು ಜವಾಬ್ದಾರಿಯುತ ಮಂತ್ರಿಯಾಗಿ, ಶೋಷಿತರ ಹಣ ಕಬಳಿಸಿರುವುದು ಕಾನೂನಿನ ಅಪರಾಧವಾಗಿದ್ದು, ಅವರ ಮೇಲೆ ದೌರ್ಜನ್ಯ ಪ್ರಕರಣದಡಿ ಕೇಸು ದಾಖಲಿಸಬೇಕು.
ಅಂಶಗಳನ್ನು ಈಗಿನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮತ್ತು ಸಮಾಜಕಲ್ಯಾಣ ಮಂತ್ರಿ ಹೆಚ್.ಸಿ.ಮಹಾದೇವಪ್ಪ ನವರು ಗಂಭೀರಗಾಗಿ ಪರಿಗಣಿಸಿ ಸಚಿವ ದರ್ಶನಾಪೂರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಶೋಷಿತರ ಜಮೀನು ಮತ್ತು SCSP/TSP ಯೋಜನೆ ಹೆಸರಿನಲ್ಲಿ ಹಣ ಕಬಳಿಸಿದ್ದವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಶರಣಬಸಪ್ಪ ದರ್ಶನಾಪೂ ರವರನ್ನು ಮಂತ್ರಿಮಂಡಳದಿಂದ ಕೈಬಿಡಬೇಕು, ಮುನ್ಸಿಪಾಲಟಿ ಆಸ್ತಿ ಕಬಳಿಸುವಲ್ಲಿ ಸಹಕರಿಸಿ ಶಹಾಪೂರ ಪುರಸಭೆಯ ಹಿಂದಿನ ಎಲ್ಲಾ ಅಧಿಕಾರಿಗಳ
ವಿರುದ್ದ ಕಾನೂನು ಕ್ರಮ ಜರುಗಿಸಿ ಜೈಲಿಗಟ್ಟಬೇಕು ಎಂದು ತಮ್ಮ ಮೂಲಕ ಆಗ್ರಹಪಡಿಸುತ್ತಿದ್ದೇವೆ. ಈ ಸಂಧರ್ಭದಲ್ಲಿ ಹಮಮಂತ ಜೀ ಯಳಸಂಗಿ
ದಲಿತಸೇನೆ ರಾಜ್ಯಧ್ಯಕ್ಷರು
ಹಾಗೂ ನ್ಯಾಯವಾದಿಗಳು,
ಎಂ ಡಿ ಖಾಲೀದ್ ಖಾನ್
ದಲಿತಸೇನೆ ರಾಜ್ಯಧ್ಯಕ್ಷರು
ಯುವ ಘಟಕ,
ಎಂ ಎ ಸಿಂದಗಿಕರ್ ದಲಿತಸೇನೆ ರಾಜ್ಯಉಪಾಧ್ಯಕ್ಷರು,ಜಾವೇದ್ ಖಾನ್ ರಾಯಚೂರ್ ದಲಿತಸೇನೆ
ರಾಜ್ಯ ಸಂಘಟನಾ ಕಾರ್ಯದರ್ಶಿ ಖಾಲಿದ್ ಖಾನ್ ರಾಜ್ಯಯುವ ಘಟಕ ಅಧ್ಯಕ್ಷ ಹಾಗೂ ಸಂತೋಷ ಬಿ ಪಾಳಾ
ದಲಿತಸೇನೆ ವಿಭಾಗೀಯ
ಪ್ರಧಾನಕಾರ್ಯದರ್ಶಿ,ಶಾಂತಪ್ಪ ಬಿ ಸಾಲಿಮನಿ
ದಲಿತಸೇನೆ ಜಿಲ್ಲಾ ಮುಖಂಡರು ಯಾದಗಿರಿ,ಪವಿತ್ರಾಗೌಡ ದಲಿತಸೇನೆ
ರಾಜ್ಯಧ್ಯಕ್ಷರು ಮಹಿಳಾ ಘಟಕ,ತಾಜಖಾನ್
ದಲಿತಸೇನೆ ನಗರಾಧ್ಯಕ್ಷ ಬೆಂಗಳೂರು ನಗರ, ಹಾಗೂ ಅನೇಕ ದಲಿತಸೇನೆ ಕಾರ್ಯಕರ್ತರು ಹಾಗೂ ಮುಖಂಡರು ಸಹಭಾಗಿಯಾಗಿದ್ದರು.