ಹುಕ್ಕೇರಿ : ನಕಾ ಬಳಿ ವ್ಯಕ್ತಿಗೆ ಹಾಡು ಹಗಲೇ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ ಕೊಲೆಯಾದ ವ್ಯಕ್ತಿ ಮಲಿಕ್ ಹುಸೇನ್ ಕಿಲ್ಲೆದಾರ ವಯಸ್ಸು 26ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ನಿವಾಸಿ ಆಗಿರುತ್ತಾನೆ
ಮಾರಕಸ್ತ್ರಗಳಿಂದ ಮೊದಲು ಕೈ ತುಂಡು ಮಾಡಿ ನಂತರ ತಲೆಗೆ ಹಾಗೂ ಹೊಟ್ಟೆಗೆ ಮಾರಕಸ್ತ್ರಗಳಿಂದ ಹೊಡೆದಿರುತ್ತಾರೆ
ಹುಕ್ಕೇರಿಯಲ್ಲಿ ಸಂತೆ ನಡೆಯುತ್ತಿರುವಾಗ ಬೈಕ್ ನಲ್ಲಿ ಬಂದು ಒಬ್ಬ ತಲವಾರ ಒಬ್ಬ ಕುಡುಗೋಲ ಹಿಡಿದಿರುವ ಸಿ ಸಿ ಟಿವಿಯಲ್ಲಿ ಈ ಘಟನೆಯನ್ನು ರೆಕಾರ್ಡ್ ಆಗಿರುತ್ತದೆ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಯನ್ನು ಅವರಗೋಳದ ಮಲಿಕ ವಯಸ್ಸು (26) ಎಂದು ಗುರುತಿಸಲಾಗಿದೆ ಯಾವದೇ ಹಳೆಯ ದ್ವೇಷದಿಂದ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ
ಹುಕ್ಕೇರಿ ಪಟ್ಟದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ
ಕೊಲೆಯಾದ ವಿಷಯ ತಿಳಿದಂತೆ ಸ್ಥಳಕ್ಕೆ ಜಮಾಹಿಸಿದ ಜನರನ್ನು ಪೊಲೀಸರು ಹರಸಾಹಸ ಪಟ್ಟರು ಹಾಗೂ ಕೊಲೆಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಿಸಲಾಯಿತು ಹಾಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಸದಾನಂದ ಎಂ