ಸತ್ಯವನ್ನು ತಿಳಿದು ಬದುಕಿದರೆ ಜೀವನ ಸಾರ್ಥಕ : ಪರಮ ಪೂಜ್ಯ ಸಿದ್ದಲಿಂಗ ದೇವರು

ಹುಣಸಗಿ: ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸತ್ಯದ ಹಾದಿಯಲ್ಲಿ ನಡೆಯಬೇಕು ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಸಿದ್ಧಲಿಂಗ ದೇವರು ಹೇಳಿದರು.‌

* ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾದ ಎಡೆಯೂರು ಸಿದ್ಧಲಿಂಗೇಶ್ವರರ ಮಹಾಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳಿಗೆ ತಮ್ಮ ಹಿತನುಡಿಗಳನ್ನು ಬಡಿಸಿದರು.

* ಯಾರು ಸತ್ಯವನ್ನು ತಿಳಿದುಕೊಂಡು ಬದುಕುತ್ತಾರೆ ಯಾರ ಮನಸ್ಸು ನೋಯಿಸದೇ ಕಾಲೆಳೆಯುವ ಬದಲು ಒಳ್ಳೆಯ ಗುಣವನ್ನು ಬೆಳೆಸಿಕೊಂಡು ಒಳ್ಳೆಯ ಸಂಸ್ಕಾರವನ್ನು ಹೊಂದಬೇಕು ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವುದರ ಜೊತೆಗೆ ಸತ್ಯವನ್ನು ತಿಳಿದುಕೊಂಡು ಹೋಗಬೇಕು.

* ಹುಣಸಗಿ ಪಟ್ಟಣದಲ್ಲಿ ಭಕ್ತಿಯ ಪರಾಕಾಷ್ಠೆ ಹೆಚ್ಚುತ್ತಿದೆ ಇದೇ ಭಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಸತ್ಯದಿಂದ ನಡೆದು ಪಟ್ಟಣದ ನೀಲಕಂಠೇಶ್ವರ ದೇವರ ಕೃಪೆಗೆ ಪಾತ್ರರಾಗಿ ನಿಮ್ಮ ಜೀವನ ಪಾವನವಾಗುತ್ತದೆ. ಜೊತೆಗೆ ದೇವಸ್ಥಾನದಲ್ಲಿ ರಾಜಕೀಯ ಮತ್ತು ಜಾತಿಯತೆಯನ್ನು ಬೆಳೆಸದೇ ಭಕ್ತಿಯನ್ನು ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

* ಈ ವೇಳೆ ಪಟ್ಟಣದ ಹೊರ ಅಗಸಿಲ್ಲಿರುವ ಮಲ್ಲಯ್ಯ ದೇವಸ್ಥಾನದಿಂದ ನೀಲಕಂಠೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಸಿದ್ದಲಿಂಗ ದೇವರು ಅವರಿಗೆ ಪಟ್ಟಣದ ಮಾತೆಯರಿಂದ ಹೂಮಳೆ ಸೇರಿಸುವುದರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

* ಈ ಒಂದು ಮಹಾಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದಲಿಂಗ ದೇವರ ಹಿತ ನುಡಿಯನ್ನು ಕೇಳಲು ಪಟ್ಟಣದ ಎಲ್ಲಾ ಭಕ್ತಾದಿಗಳು ದೇವಸ್ಥಾನದ ಆವರಣದಲ್ಲಿ ಸೇರಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

ತದನಂತರ ಸಿದ್ದಲಿಂಗ ದೇವರಿಗೆ ಮಹಿಳೆಯರಿಂದ ರಾಖಿ ಕಟ್ಟುವ ಮೂಲಕ ಸಹೋದರತ್ವವನ್ನು
ಮೆರೆಯಲಾಯಿತು
ಈ ಕಾರ್ಯಕ್ರಮ ಸಂದರ್ಭದಲ್ಲಿ ಊರಿನ ಮುಖಂಡರಾದ ಸಿದ್ದು ಸಾಹುಕಾರ ಮುದುಗಲ, ಚಂದ್ರಶೇಖರ ಸೌಕಾರ ದಂಡಿನ, ಆರ ಎಂ ರೇವಡಿ, ಮಾಂತಪ್ಪ ಸೌಕಾರ ಮಲ್ಗಲ್ದಿನ್ನಿ,
ಶಿವು ದೇಸಾಯಿ, ಬಸವರಾಜ ಬೂದಿಹಾಳ, ಹಾಗೂ ಹುಣಸಗಿಯ ಎಲ್ಲ ಹಿರಿಯ ಪತ್ರಕರ್ತರು
ಅನೇಕ ಊರಿನ ಮಹಿಳೆಯರು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ : ರಸುಲ ಬೆನ್ನೂರ್

error: Content is protected !!